ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾರಾಲಿಂಪಿಕ್ಸ್ : ಫೈನಲ್ ಪ್ರವೇಶಿಸಿದ ಪ್ರಮೋದ ಭಗತ್

ಟೋಕಿಯೊ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಬ್ಯಾಡ್ಮಿಂಟನ್ ಪುರುಷರ ಎಸ್ ಎಲ್ 3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಭಗತ್ ಅವರು ಜಪಾನ್ ನ ಡೈಕೆ ಫುಜಿಹಾರ ವಿರುದ್ಧ 21-11, 21-16ರ ಅಂತರದಲ್ಲಿ ಗೆದ್ದು ಫೈನಲ್ ಗೆ ಪ್ರವೇಶಿಸಿದರು.

ಈ ಮೂಲಕ 33 ವರ್ಷದ ಏಷ್ಯಾ ಚಾಂಪಿಯನ್ ಭಗತ್, ಕನಿಷ್ಠ ಬೆಳ್ಳಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಇಂದು ನಡೆಯಲಿರುವ ಫೈನಲ್ ನಲ್ಲಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ಪಾದಾರ್ಪಣೆಯಾಗಿದೆ. ಇದರೊಂದಿಗೆ ಫೈನಲ್ ಗೆ ತಲುಪಿದ ಭಾರತದ ಪ್ರಥಮ ಆಟಗಾರ ಎಂಬ ಹಿರಿಮೆಗೆ ಭಗತ್ ಭಾಜನರಾಗಿದ್ದಾರೆ.

ಬ್ಯಾಡ್ಮಿಂಟನ್ ಪುರುಷರ ಮಿಶ್ರ ಡಬಲ್ಸ್ (ಎಸ್ಎಲ್3-ಎಸ್ಯು5) ವಿಭಾಗದಲ್ಲೂ ಪಲಕ್ ಕೊಹ್ಲಿ ಜೊತೆ ಸೇರಿ ಸ್ಪರ್ಧಿಸುತ್ತಿರುವ ಭಗತ್, ಇಂದೇ ಸೆಮಿಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ.

5ರ ಹರೆಯದಲ್ಲೇ ಪೋಲಿಯೊದಿಂದಾಗಿ ಪ್ರಮೋದ್ ಅವರ ಎಡಗಾಲು ಊನವಾಗಿದೆ. ಆದರೆ ಅದನ್ನು ಮೀರಿ ನಾಲ್ಕು ವಿಶ್ವ ಚಾಂಪಿಯನ್ ಶಿಪ್ ಸೇರಿದಂತೆ ಒಟ್ಟು 45 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

04/09/2021 08:39 am

Cinque Terre

44.01 K

Cinque Terre

2

ಸಂಬಂಧಿತ ಸುದ್ದಿ