ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಭಾರತ VS ಇಂಗ್ಲೆಂಡ್ ತೃತೀಯ ಟೆಸ್ಟ್: ವಿಜಯದ ಮೇಲೆ ಭಾರತದ ಚಿತ್ತ

ಲೀಡ್ಸ್‌: ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಗೆಲುವುದು ಸಾಧಿಸಿತ್ತು. ಬುಧವಾರದಿಂದ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ 3ನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಿದೆ. ಲೀಡ್ಸ್‌ ಕೂಡ ಭಾರತಕ್ಕೆ ಒಲಿದು, ಲೀಡ್ ಹೆಚ್ಚಲಿ ಎಂಬ ಹಾರೈಕೆ ಅಭಿಮಾನಿಗಳದ್ದಾಗಿದೆ.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಅಂತಿಮ ದಿನ ಮಳೆ ಸುರಿದು ಟೀಂ ಇಂಡಿಯಾದ ಗೆಲುವನ್ನು ಕಸಿದುಕೊಂಡಿತ್ತು. ಲಾರ್ಡ್ಸ್ ಮೈದಾನದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇಂದಿನ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ವಿನ್ನಿಂಗ್ ಟೀಂ ಕಾಂಬಿನೇಶನ್‌ ಮುಂದುವರಿಯುವುದು ಬಹುತೇಕ ಖಚಿತ. ಶಾರ್ದೂಲ್ ಠಾಕೂರ್‌ ಸಂಪೂರ್ಣ ಫಿಟ್‌ನೆಸ್ ಹೊಂದಿದ್ದರೂ ಅವಕಾಶ ಪಡೆಯುವುದು ಕಷ್ಟ. ಅನುಭವಿ ಇಶಾಂತ್ ಶರ್ಮ ಲಾರ್ಡ್ಸ್‌ನಲ್ಲಿ ಘಾತಕವಾಗಿ ಪರಿಣಮಿಸಿದ್ದಾರೆ.

ಸಂಭಾವ್ಯ ತಂಡಗಳು :

ಭಾರತ: ಕೆ.ಎಲ್‌. ರಾಹುಲ್‌, ರೋಹಿತ್‌ ಶರ್ಮ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌.

ಇಂಗ್ಲೆಂಡ್‌: ರೋರಿ ಬರ್ನ್ಸ್, ಹಸೀಬ್‌ ಹಮೀದ್‌, ಡೇವಿಡ್‌ ಮಲಾನ್‌, ಜೋ ರೂಟ್‌ (ನಾಯಕ), ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಓಲೀ ರಾಬಿನ್ಸನ್‌, ಶಕೀಬ್‌ ಮಹಮೂದ್‌, ಜೇಮ್ಸ್‌ ಆ್ಯಂಡರ್ಸನ್‌.

Edited By : Vijay Kumar
PublicNext

PublicNext

25/08/2021 08:49 am

Cinque Terre

76.98 K

Cinque Terre

1

ಸಂಬಂಧಿತ ಸುದ್ದಿ