ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಫ್‌ ಸ್ಟಂಪ್ ಮೇಲೆ ಆಡೋದನ್ನು ರಾಹುಲ್‌ರಿಂದ ಕೊಹ್ಲಿ ಕಲಿಯಲಿ: ಪಾಕ್ ಮಾಜಿ ಕ್ರಿಕೆಟರ್

ಲಂಡನ್‌: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆ.ಎಲ್.ರಾಹುಲ್ ಬ್ಯಾಟಿಂಗ್ ಪ್ರದರ್ಶನಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳ ಆಟಗಾರರು, ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಝ್ ರಾಜಾ ಕೂಡ ಕನ್ನಡಿಗ ಕೆ.ಎಲ್.ರಾಹುಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಲಹೆ ನೀಡಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ರಮಿಝ್‌ ರಾಜಾ, "ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್ ಶರ್ಮಾ ಅವರ ಜೊತೆಗೆ ವಿರಾಟ್‌ ಕೊಹ್ಲಿ ಕೂಡ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ತಮ್ಮ ಸ್ವಾಭವಿಕ ಆಟದ ವಿರುದ್ಧ ರನ್‌ ಗಳಿಸುವುದು ಕೊಹ್ಲಿಗೆ ತುಂಬಾನೆ ಕಷ್ಟ. ಆದರೂ ಇದನ್ನು ಅವರು ಮಾಡಿದ್ದರು. ಆದರೆ ಓಲ್ಲೀ ರಾಬಿನ್ಸನ್‌ ಎಸೆದಿದ್ದು ಅತ್ಯುತ್ತಮ ಎಸೆತವಾದರೂ, ಮತ್ತೊಮ್ಮೆ ವಿರಾಟ್‌ ಕೊಹ್ಲಿ ಚೆಂಡನ್ನು ಬಿಡಬೇಕೆ? ಅಥವಾ ಮುಂದಕ್ಕೆ ಆಡಬೇಕೆ? ಎಂಬ ಗೊಂದಲಕ್ಕೆ ಒಳಗಾಗಿ ವಿಕೆಟ್‌ ಒಪ್ಪಿಸಿದ್ದರು. ಹಾಗಾಗಿ, ಕೊಹ್ಲಿ ಆಫ್‌ ಸ್ಟಂಪ್‌ ಮೇಲೆ ಆಡುವ ಬಗ್ಗೆ ಕೆ.ಎಲ್‌ ರಾಹುಲ್‌ ಅವರಿಂದ ಕಲಿಯುವುದು ಒಳಿತು" ಎಂದು ರಾಜಾ ಸಲಹೆ ನೀಡಿದ್ದಾರೆ.

"ಕೆ.ಎಲ್‌ ರಾಹುಲ್‌ ಅವರಿಂದ ಪೂಜಾರ ಸಾಕಷ್ಟು ಕಲಿಯುವುದಿದೆ. ಇಂತಹ ಪಿಚ್‌ಗಳಲ್ಲಿ ಆಡುವಾಗ ಪೂಜಾರ ಸಾಕಷ್ಟು ಕಠಿಣತೆ ಎದುರಿಸುತ್ತಿದ್ದಾರೆ. ಜೇಮ್ಸ್ ಆಂಡರ್ಸನ್‌ ಹಾಗೂ ಅವರ ಹುಡುಗರನ್ನು ಎದುರಿಸುವುದು ಸುಲಭವಲ್ಲ. ಹಾಗಾಗಿ, ಪೂಜಾರ, ಕೈಗಳನ್ನು ಹೆಚ್ಚು ಉಪಯೋಗಿಸುವ ಬದಲು ಹೆಚ್ಚಾಗಿ ಪಾದಗಳನ್ನು ಬಳಸಿಕೊಳ್ಳಬೇಕು. ನೀವು ಮಾನಸಿಕವಾಗಿ ಶಕ್ತರಾಗುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು," ಎಂದು ರಮಿಝ್‌ ರಾಜಾ ಭಾರತೀಯ ಬ್ಯಾಟ್ಸ್‌ಮನ್‌ಗೆ ಉಪಯುಕ್ತ ಸಲಹೆ ನೀಡಿದ್ದಾರೆ.

Edited By : Vijay Kumar
PublicNext

PublicNext

13/08/2021 03:33 pm

Cinque Terre

23.9 K

Cinque Terre

2

ಸಂಬಂಧಿತ ಸುದ್ದಿ