ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್‌, ಹಿಟ್‌ಮ್ಯಾನ್ ಟಾಪರ್

ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಪ್ರಕಟಿಸಿದ್ದು, ಬ್ಯಾಟ್ಸ್‌ಮನ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಅಗ್ರ ಎರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ವಿರಾಟ್‌ ಕೊಹ್ಲಿ ನಂಬರ್‌ ಒನ್ ಸ್ಥಾನದಲ್ಲಿದ್ದರೆ, ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, 870 ಅಂಕಗಳೊಂದಿಗೆ ಅಗ್ರಸ್ಥಾನವನ್ನ ಮತ್ತಷ್ಟು ಗಟ್ಟಿಮಾಡಿಕೊಂಡಿದ್ದರೆ, ಆಸೀಸ್​ ಸರಣಿಗೆ ಅಲಭ್ಯರಾಗಿದ್ದ ರೋಹಿತ್ 842 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ರೋಹಿತ್​ಗಿಂತ ಕೇವಲ 5 ಅಂಕ ಹಿಂದಿರುವ ಪಾಕ್​ನ ಬಾಬರ್ ಅಜಂ 3ನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾಗೆ ಪೈಪೋಟಿ ನೀಡುತ್ತಿದ್ದಾರೆ. 4 ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ನ್ಯೂಜಿಲೆಂಡ್​ನ ಅನುಭವಿ ರಾಸ್ ಟೇಲರ್, ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್ ಸ್ಥಾನ ಪಡೆದಿದ್ದಾರೆ.

ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್, ಅಫ್ಘಾನ್​​ನ ಮುಜೀಬ್ ಉರ್ ರಹಮಾನ್, ಟೀಂ ಇಂಡಿಯಾದ ಜಸ್‌ಪ್ರೀತ್ ಬೂಮ್ರಾ ಅಗ್ರ ಮೂರು ಸ್ಥಾನದಲ್ಲಿದ್ದಾರೆ.

Edited By : Vijay Kumar
PublicNext

PublicNext

29/01/2021 07:30 am

Cinque Terre

39.56 K

Cinque Terre

0

ಸಂಬಂಧಿತ ಸುದ್ದಿ