ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಮತ್ತು ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯವು ದಿ ಗಬ್ಬಾ ಕ್ರಿಕೆಟ್ ಗ್ರೌಂಡ್ನಲ್ಲಿ ಆರಂಭವಾಗಿದೆ. ಪಂದ್ಯದ ಮೊದಲ ದಿನದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ.
ಆಸೀಸ್ ಇನ್ನಿಂಗ್ಸ್‌ನಲ್ಲಿ ಟಿ.ನಟರಾಜನ್ ಎಸೆದ 83 ಓವರ್‌ನಲ್ಲಿ ಒಂದು ಹಾಸ್ಯ ಪ್ರಸಂಗ ನಡೆಯಿತು. ನಟರಾಜನ್ ಮೂರನೇ ಎಸೆತವನ್ನು ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ವಿಕೆಟ್ ಕೀಪರ್ ರಿಷಬ್ ಪಂತ್ ಕೈ ಸೇರಿತು. ಕ್ಯಾಚ್ ಹಿಡಿದ ಸಂಭ್ರಮದಲ್ಲಿದ್ದ ಪಂತ್ ಔಟ್ ಎಂದು ಕೂಗುತ್ತಾ ಅಂಪೈರ್‌ಗೆ ಮನವಿ ಮಾಡಿದರು. ಪಂತ್ ಮನವಿಗೆ ಸಹ ಆಟಗಾರರು ಸಾಥ್ ನೀಡಲಿಲ್ಲ. ಅಷ್ಟೇ ಅಲ್ಲದೆ ಡಿಆರ್‌ಎಸ್ ಪಡೆಯುವಂತೆ ಪಂತ್ ನಾಯಕ ಅಜಿಂಕ್ಯ ರಹಾನೆ ಬಳಿಗೆ ಹೋದರು. ಆದರೆ ರಹಾನೆ ಬೇಡ ಎಂದು ಹೇಳಿ ಕಳುಹಿಸಿದರು.
ಇತ್ತ ಗೊಣಗುತ್ತ ಹಿಂದಿರುಗಿದ ಪಂತ್ ಅವರನ್ನು ಸಹ ಆಟಗಾರ ರೋಹಿತ್ ಶರ್ಮಾ ಗೇಲಿ ಮಾಡಿ ನಗೆ ಬೀರಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿ ರಿಷಬ್ ಪಂತ್ ಕಾಲೆಳೆದಿದ್ದಾರೆ.
PublicNext
15/01/2021 03:54 pm