ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿಪಟು ಬಬಿತಾ ಫೋಗಾಟ್

ನವದೆಹಲಿ: ಖ್ಯಾತ ಕುಸ್ತಿಪಟು ಬಬಿತಾ ಫೋಗಾಟ್ ಗಂಡು ಮಗನಿಗೆ ಜನ್ಮ ನೀಡಿದ್ದಾರೆ. ಅವರು ತಮ್ಮ ಮಗನ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಮಗುವನ್ನು ಎತ್ತಿಕೊಂಡಿರುವ ಫೋಟೋಗಳನ್ನು ಟ್ವೀಟ್ ಮಾಡಿರುವ ಬಬಿತಾ ಅವರು, ''ನಮ್ಮ ಮಗ (ಸನ್‌ಶೈನ್)ನನ್ನು ಭೇಟಿ ಮಾಡಿ. ಕನಸುಗಳನ್ನು ನಂಬಿರಿ, ಅವುಗಳು ಈಡೇರುತ್ತವೆ. ಮಗ ನೀಲಿ ಬಟ್ಟೆ ಧರಿಸಿ ಸಾಧನೆ ಮಾಡಲಿದ್ದಾನೆ'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮಗನನ್ನು ಖ್ಯಾತ ಕುಸ್ತಿಪಟುವಾಗಿಸುವ ಕನಸನ್ನು ಬಬಿತಾ ಬಿಚ್ಚಿಟ್ಟಿದ್ದಾರೆ.

ಬಬಿತಾ ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಬಾಲಾಲಿ ಗ್ರಾಮದವರು. ಅವರು 2019ರ ಡಿಸೆಂಬರ್ 1ರಂದು ಭಾರತೀಯ ಕೇಸರಿ ಆಗಿದ್ದ ಕುಸ್ತಿಪಟು ವಿವೇಕ್ ಸುಹಾಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಕೇವಲ 21 ಜನ ಆಗಮಿಸಿದ್ದರು. ವಿಶೇಷವೆಂದರೆ ಮದುವೆ ವರದಕ್ಷಿಣೆ ಇಲ್ಲದೆ ನಡೆದಿತ್ತು. ಬ್ಯಾಂಡ್ ಬಾಜಾ ಮತ್ತು ಡಿಜೆ ಕೂಡ ವ್ಯವಸ್ಥೆ ಮಾಡಿರಲಿಲ್ಲ. ಈ ಸಂಪೂರ್ಣ ವಿವಾಹವು ಪ್ಲಾಸ್ಟಿಕ್ ಮುಕ್ತವಾಗಿತ್ತು.

ಬಬಿತಾ ದೇಶದ ಪರ ಅನೇಕ ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರಿಗೆ ದೇಶದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಕೂಡ ನೀಡಲಾಗಿದೆ.

Edited By : Vijay Kumar
PublicNext

PublicNext

11/01/2021 07:41 pm

Cinque Terre

50.48 K

Cinque Terre

5

ಸಂಬಂಧಿತ ಸುದ್ದಿ