ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವಿ ಕಮ್‌ಬ್ಯಾಕ್‌ಗೆ ತಣ್ಣೀರೆರಚಿದ ಬಿಸಿಸಿಐ.!- ಕಾರಣ ಇಲ್ಲಿದೆ ನೋಡಿ

ಮುಂಬೈ: ಎಲ್ಲಾ ಮೂರು ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಮತ್ತೆ ದೇಸಿ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಬಿಸಿಸಿಐ ಬ್ರೇಕ್ ಹಾಕಿದೆ.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್‌ ಅವರನ್ನು ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ (ಪಿಸಿಎ) ದೇಸಿ ಕ್ರಿಕೆಟ್‌ಗೆ ಕರೆತರುವ ಪ್ರಯತ್ನಕ್ಕೆ ಮುಂದಾಗಿತ್ತು. ಇದಕ್ಕೆ ಯುವಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಬಿಸಿಸಿಐನ ಕಟ್ಟುನಿಟ್ಟಿನ ನಿಯಮದಿಂದಾಗಿ ಯುವಿ ಕನಸನ್ನು ಕೈಬಿಡಲಾಗಿದೆ.

ಬಿಸಿಸಿಐ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರ ಒಂದು ವೇಳೆ ನಿವೃತ್ತಿ ವಾಪಸ್ ಪಡೆಯುವುದಾದರೆ ಆತ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಿರಬಾರದು. ಆಗ ಮಾತ್ರ ಆತ ದೇಸಿ ಕ್ರಿಕೆಟ್ ಅಥವಾ ಐಪಿಎಲ್‌ನಲ್ಲಿ ಆಡಲು ಅರ್ಹನಾಗಿರುತ್ತಾನೆ. ಆದರೆ ಯುವಿ ಈಗಾಗಲೇ ವಿದೇಶಿ ಲೀಗ್‌ಗಳಲ್ಲಿ ಆಡಿದ್ದಾರೆ. ಹೀಗಾಗಿ ಯುವಿಗೋಸ್ಕರ ನಿಯಮ ಬದಲಾಯಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಇದೇ ವಿಚಾರವಾಗಿ ಈ ಹಿಂದೆ ಭಾರತದ ಅನುಭವಿ ಬೌಲರ್ ಪ್ರವೀಣ್ ತಾಂಬೆಗೂ ಬಿಸಿಸಿಐ ನಿಯಮ ಅಡ್ಡಿ ಮಾಡಿತ್ತು.

Edited By : Vijay Kumar
PublicNext

PublicNext

30/12/2020 03:13 pm

Cinque Terre

109.44 K

Cinque Terre

2

ಸಂಬಂಧಿತ ಸುದ್ದಿ