ದುಬೈ: ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಸ್ಪಿನ್ನರ್ ಯಜುವೇಂದ್ರ ಚಹಲ್ ನಾಯಕ ವಿರಾಟ್ ಕೊಹ್ಲಿ ತಂತ್ರಗಾರಿಕೆಯನ್ನು ರಿವೀಲ್ ಮಾಡಿದ್ದಾರೆ.
ಐಪಿಎಲ್ 13ನೇ ಆವೃತ್ತಿಯ ಭಾಗವಾಗಿ ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಹೈದರಾಬಾದ್ ತಂಡದ ವಿರುದ್ಧ 10 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಚಹಲ್ ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದ ಬಳಿಕ ಮಾತನಾಡಿದ ಚಹಲ್, ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ವಿಕೆಟ್ ಪಡೆಯಲು ಕೊಹ್ಲಿಯ ಮಾಸ್ಟರ್ ಪ್ಲಾನ್ ನೀಡಿದ್ದನ್ನು ರಿವೀಲ್ ಮಾಡಿದ್ದಾರೆ. "ನಾನು ಮನೀಶ್‌ಗೆ ಬೌಲ್ ಮಾಡುವಾಗ ಚಂಡನ್ನು ಆಫ್-ಸ್ಟಂಪ್ ಹೊರಗೆ ಹಾಕಲು ಪ್ರಯತ್ನಿಸುತ್ತಿದ್ದೆ. ಆದರೆ ವಿರಾಟ್ ಸ್ಟಂಪ್ ಒಳಗೆ ಬೌಲ್ ಮಾಡುವಂತೆ ಸಲಹೆ ನೀಡಿದರು. ಅದರಂತೆ ಮನೀಶ್ ಪಾಂಡೆಗೆ ಚಂಡನ್ನು ಹೊಡೆಯಲು ಅವಕಾಶ ನೀಡಿದೆ. ಗಾಳಿಯಲ್ಲಿ ತೂರಿದ ಚಂಡು ನೇರವಾಗಿ ವಿರಾಟ್ ಕೈಸೇರಿತು" ಎಂದು ಹೇಳಿದ್ದಾರೆ.
PublicNext
22/09/2020 03:18 pm