ಇಸ್ಲಾಮಾಬಾದ್: ಕೆಲ ವರ್ಷಗಳ ಹಿಂದೆ ಭಾರತ ನೀರಿನಲ್ಲಿ ಮುಳುಗುತ್ತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಹೇಳಿದ್ದರು. ದುರದೃಷ್ಟವಶಾತ್, ಅವರು ಭಾರತಕ್ಕಾಗಿ ಬಯಸಿದ್ದು ಅವರ ದೇಶಕ್ಕೆ ಸಂಭವಿಸಿದೆ.
ಈ ಬಗ್ಗೆ ತಮ್ಮ ಯೂಟ್ಯುಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಜಾವೇದ್ ಮಿಯಾಂದಾದ್, ಕಾಶ್ಮೀರದಲ್ಲಿ ಕಾಶ್ಮೀರಿಯರನ್ನು ಬಂಧಿಸಿ ಇಟ್ಟಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ನಿಮ್ಮ ಈ ಕ್ರೌರ್ಯ ಕ್ಷಮಿಸುವಂದ್ದಲ್ಲ. ಭಾರತ ನೀರಿನಲ್ಲಿ ಮುಳುಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು. ಆದರೆ ಈಗ ಪಾಕಿಸ್ತಾನವು ಭಾರಿ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಈವರೆಗೂ ಸುಮಾರು 1,300 ಜನ ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ.
PublicNext
04/09/2022 04:51 pm