ದುಬೈ: 2022ರ ಕ್ರಿಕೆಟ್ ಏಷ್ಯಾಕಪ್‌ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಭಾರತ ಎಲ್ಲಾ ವಿಭಾಗದಲ್ಲಿ ಭರ್ಜರಿ ತಯಾರಿ ನಡೆಸಿದೆ. ಅಭ್ಯಾಸದ ನಡುವೆ ಆಟಗಾರರು ರಿಲಾಕ್ಷ್ ಮೂಡಿಗೆ ತೆರಳಿದ್ದಾರೆ. ಗುರುವಾರ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಂ ಇಂಡಿಯಾದ ಅಭ್ಯಾಸದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫುಲ್ ಜಾಲಿ ಮೂಡಿನಲ್ಲಿದ್ದರು.
ರೋಹಿತ್ ಶರ್ಮಾ ಕಿಕ್ ಸ್ಕೂಟರ್‌ನಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡಿದರು. ರೋಹಿತ್ ಶರ್ಮಾ ಅವರು ಕಿಕ್ ಸ್ಕೂಟರಲ್ಲಿ ಎಂಜಾಯ್ ಮಾಡಿರುವುದನ್ನು ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
PublicNext
26/08/2022 05:26 pm