ಲಂಡನ್: ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ಸೆ.10 ರಂದು ಪ್ರಾರಂಭವಾಗಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿನ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದಾಗಿ ರದ್ದುಗೊಂಡಿದೆ. ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಜೊತೆಗೆ ಇತರ ಆಟಗಾರರು ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.
ಇದಾದ ಬಳಿಕ ಮೊದಲು ರವಿಶಾಸ್ತ್ರಿ, ನಂತರ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್, ಹಿರಿಯ ಫಿಸಿಯೋ ನಿತಿನ್ ಪಟೇಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಐದನೇ ಟೆಸ್ಟ್ ಗೆ ಮೊದಲು, ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೂಡ ಸೋಂಕು ದೃಢಪಟ್ಟ ಕಾರಣ ಅನಿವಾರ್ಯವಾಗಿ ಪಂದ್ಯರದ್ದುಪಡಿಸಿದ್ದರು.
ಈ ಪರಿಸ್ಥಿತಿಗೆ ಮುಖ್ಯ ಕೋಚ್ ರವಿಶಾಸ್ತ್ರಿ ಕಾರಣ ಎಂಬ ವ್ಯಾಪಕ ಟೀಕೆಗಳ ಹಿನ್ನಲೆಯಲ್ಲಿ ರವಿಶಾಸ್ತ್ರಿ ಪ್ರತಿಕ್ರಿಯಿಸಿ ಇಂಗ್ಲೇಂಡ್ ನಲ್ಲಿ ಎಲ್ಲ ಬಾರ್ ಗಳು ತೆರೆದಿವೆ, ಆದರೆ ತಮ್ಮಿಂದಾಗಿ ತಂಡದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ತಮ್ಮನ್ನು ಟೀಕಿಸುವವರ ವಿರುದ್ದ ತಿರುಗಿ ಬಿದ್ದಿದ್ದಾರೆ.
ಬ್ರಿಟನ್ ನಲ್ಲಿ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲಾಗಿದೆ. ಎಲ್ಲಾ ಜನರು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಒಂದೊಮ್ಮೆ ನನ್ನಿಂದ ಸೋಂಕು ಹರಡಿದ್ದರೆ ಮೊದಲ ಟೆಸ್ಟ್ನಿಂದಲೇ ಅದು ಸಂಭವಿಸಬೇಕಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
PublicNext
12/09/2021 10:16 pm