ಮುಂಬೈ: ಕ್ರಿಕೆಟರ್ ಕಪಿಲ್ ದೇವ್ ಜೀವನಾಧಾರಿತ 83 ಚಿತ್ರ ಈಗಾಲಗೇ ಭಾರಿ ಸುದ್ದಿಯಲ್ಲಿಯೇ ಇದೆ. ಚಿತ್ರದ ಕಂಟೆಂಟ್ ಕೂಡ ಸೂಪರ್ ಆಗಿಯೇ ಇದೆ. ಆದರೆ ಈಗ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ದೀಪಿಕಾ ಪಡಕೋಣೆ ವಿರುದ್ಧ ಒಂದು ಆರೋಪ ಕೇಳಿ ಬರುತ್ತಿದೆ. ಅದು ವಂಚನೆಯ ಆರೋಪ.ಬನ್ನಿ ಹೇಳ್ತೀವಿ.
83 ಚಿತ್ರ ಇನ್ನೇನು ಇದೇ ಡಿಸೆಂಬರ್-23 ಕ್ಕೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಚಿತ್ರಕ್ಕೆ ಫೈನಾನ್ಸ್ ಮಾಡಿರೋ ದುಬೈನ ಉದ್ಯಾಮಿ ಮತ್ತು ಫೈನ್ಸಾನ್ಸಿಯರ್ ಗರಂ ಆಗಿದ್ದಾರೆ. ಚಿತ್ರಕ್ಕೆ ಕೋಟಿ ಕೋಟಿ ಹಣ ಹೂಡಿರೋ ಈ ಫೈನಾನ್ಸಿಯರ್ ಗೆ ಈಗ ಅನುಮಾನ ಶುರು ಆಗಿದೆ. ಅದಕ್ಕೇನೆ ಮುಂಬೈ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನಿರ್ಮಾಪಕರಾದ ದೀಪಿಕಾ ಪಡಕೋಣೆ-ಕಬೀರ್ ಖಾನ್,ಸಾಜಿದ್ ನಾಡಿಯಾಡ್ವಾಲಾ ವಿರುದ್ಧ ವಂಚನೆ ಆರೋಪವನ್ನೂ ಮಾಡಿದ್ದಾರೆ.
ಚಿತ್ರ ರಿಲೀಸ್ ಆದ್ಮೇಲೆ 16 ಕೋಟಿ ಗಳಿಕೆ ಮಾಡುತ್ತದೆ ಎಂದೇ ನಿರ್ಮಾಪಕರು ಫೈನಾನ್ಸಿಯರ್ ಗೆ ಹೇಳಿದ್ದಾರಂತೆ. ಆದರೆ ಸಿನಿಮಾ ಇನ್ನೂ ರಿಲೀಸ್ ಆಗಿಯೇ ಇಲ್ಲ.ಆದರೆ ಇದಕ್ಕೂ ಮೊದಲೇ ಫೈನಾನ್ಸಿಯರ್ ಗೆ ಡೌಟ್ ಬಂದಿದೆ. ಅದಕ್ಕೇನೆ ಈಗ ಕೋರ್ಟ್ ಮೆಟ್ಟಿಲೇರಿದಂತಿದೆ. ಅಂದ್ಹಾಗೆ ಚಿತ್ರ ಇದೇ ಡಿಸೆಂಬರ್-24 ರಂದು ರಿಲೀಸ್ ಆಗುತ್ತಿದೆ.
PublicNext
11/12/2021 04:09 pm