ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಸಾಮಾನ್ಯ ಕಿಲಾಡಿ ಅಲ್ಲ. ಚಾಣಾಕ್ಷ ಫೀಲ್ಡಿಂಗ್, ಜಾಣತನದ ಬೌಲಿಂಗ್, ಸ್ಫೋಟಕ ಬ್ಯಾಟಿಂಗ್‌ನಲ್ಲಿಯೂ ಅವರು ಎತ್ತಿದ ಕೈ. ಈಗ ಸದ್ಯ ಅವರು ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಪುಷ್ಪ' ಚಿತ್ರದ ಒಂದು ಡೈಲಾಗ್‌ಅನ್ನು ಡಬ್ ಮಾಡಿ ಅದರ ವಿಡಿಯೋ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಪಕ್ಕ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಕಳೆದ ವಾರ ಬಿಡುಗಡೆಯಾಗಿ ರಾಷ್ಟ್ರಾದ್ಯಂತ ಯಶಸ್ವಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ಈ ಚಿತ್ರದ ಹಲವು ಡೈಲಾಗ್ಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಇದೀಗ ಜಡೇಜಾ ಕೂಡ ಅಲ್ಲು ಅರ್ಜುನ್ರಂತೆಯೇ ದಾಡಿ ಬಿಟ್ಟು ಹೆಚ್ಚು ಕಡಿಮೆ ಪುಷ್ಪ ಚಿತ್ರದಲ್ಲಿರುವ ಪುಷ್ಪರಾಜ್ನಂತೆಯೇ ಕಾಣಿಸುತ್ತಿದ್ದಾರೆ.
PublicNext
25/12/2021 07:35 pm