ಮುಂಬೈ: 1983ರಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತ ಕ್ರಿಕೆಟ್ ತಂಡಕ್ಕೆ '83' ಚಿತ್ರ ತಂಡ ಬರೋಬ್ಬರಿ 15 ಕೋಟಿ ಗೌರವ ಧನ ನೀಡಿದೆ. ಇದೆಲ್ಲ ತಂಡದ ಮೇಲಿನ ಅಭಿಮಾನಕ್ಕಾಗಿ.
1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ನಡೆದ ಘಟನಾವಳಿಗಳ ಆಧಾರಿತವಾಗಿ ಕತೆ ಹೆಣೆದು ನಿರ್ಮಿಸಲಾದ ಚಿತ್ರ '83' ಈ ಚಿತ್ರ ನೋಡಲು ಕಪಿಲ್ ದೇವ್ ಅಭಿಮಾನಿಗಳು ಹಾಗೂ ಚಿತ್ರ ರಸಿಕರು ಕಾದು ಕೂತಿದ್ದಾರೆ. ಇನ್ನು ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ. ತಂಡದ ಪ್ರತಿ ಆಟಗಾರನ ಅನುಭವ ಕಥನ ಕೇಳಿ ಅವರೆಲ್ಲರ ಒಪ್ಪಿಗೆ ಪಡೆದ ನಂತರವೇ ಕತೆ ರೂಪಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಇನ್ನು ಕೊಟ್ಟಿರುವ 15 ಕೋಟಿ ಗೌರವಧನದಲ್ಲಿ ಬಹುಪಾಲು ಅಂದ್ರೆ 5ಕೋಟಿ ಹಣವನ್ನು ಕಪಿಲ್‌ದೇವ್ ಅವರಿಗೆ ನೀಡಲಾಗಿದೆ. ಉಳಿದಂತೆ ಉಳಿದ ಆಟಗಾರರಿಗೆ ಸಮವಾಗಿ ಗೌರವ ಧನ ನೀಡಲಾಗಿದೆ.
PublicNext
22/12/2021 03:30 pm