ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಟ್ಟ ದಾಖಲೆಯೊಂದಿಗೆ ಸೋಲು ಕಂಡ ನಂತರ ಟೀಂ ಇಂಡಿಯಾ ಆಟಗಾರರಿಗೆ ಭಾರತದ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಮಹತ್ವದ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಕೈಫ್, "ನಿಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಸೈಲೆಂಟ್ ಆಗಿ ಇದ್ದುಬಿಡಿ. ಒಗ್ಗಟ್ಟಾಗಿ ಇದ್ದು ಮುಂದಿನ ಹೆಜ್ಜೆ ಮೇಲೆ ಗಮನಹರಿಸಿ. ಇದು ಸೋಲಿನಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ" ಎಂದು ಟೀಂ ಇಂಡಿಯಾ ಆಟಗಾರರಿಗೆ ಧೈರ್ಯ ಹೇಳಿದ್ದಾರೆ.
PublicNext
19/12/2020 06:00 pm