2022ರ ಐಸಿಸಿ ಮಹಿಳಾ ವಿಶ್ವಕಪ್ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ಮಾರ್ಚ್ 4 ರಿಂದ ಶುರುವಾಗಲಿರುವ ಟೂರ್ನಿ ಏಪ್ರಿಲ್ 3ರವರೆಗೆ ನಡೆಯಲಿದೆ. ಮಹಿಳಾ ವಿಶ್ವಕಪ್ ಟೂರ್ನಿ 2021ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನಡೆಯಬೇಕಾಗಿತ್ತು.
ಆದರೆ ಕೊರೊನಾ ವೈರಸ್ ಕಾರಣದಿಂದ ಐಸಿಸಿ ಪಂದ್ಯಾವಳಿಯನ್ನು ಈ ಹಿಂದೆ ಮುಂದೂಡಿತ್ತು.
ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 6 ರಂದು ಆಡಲಿದೆ.
ವೆಲ್ಲಿಂಗ್ಟನ್ ನ ಬ್ಯಾಸಿನ್ ರಿಸರ್ವ್ ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೆ ಓವಲ್ ನಲ್ಲಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ಹಾಗೆಯೇ ಏಪ್ರಿಲ್ 3 ರಂದು ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಭಾರತ ಮಹಿಳಾ ತಂಡವು ಗ್ರೂಪ್ ಹಂತದಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ.
ಇದರಲ್ಲಿ ನಾಲ್ಕು ಪಂದ್ಯಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧವಾಗಿದ್ದರೆ, ಉಳಿದ ಮೂರು ಪಂದ್ಯಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ತಂಡಗಳೊಂದಿಗೆ ಎಂಬುದು ವಿಶೇಷ.
ವಿಶ್ವಕಪ್ ವೇಳಾಪಟ್ಟಿ
ಬೇ ಓವಲ್, ಟೌರಂಗಾ
04 ಮಾರ್ಚ್ 2022 - ನ್ಯೂಜಿಲೆಂಡ್ v/s ಕ್ವಾಲಿಫೈಯರ್
06 ಮಾರ್ಚ್ 2022 - ಕ್ವಾಲಿಫೈಯರ್ v/s ಟೀಂ ಇಂಡಿಯಾ
08 ಮಾರ್ಚ್ 2022 - ಆಸ್ಟ್ರೇಲಿಯಾ v/s ಕ್ವಾಲಿಫೈಯರ್
11 ಮಾರ್ಚ್ 2022 - ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
14 ಮಾರ್ಚ್ 2022 - ದಕ್ಷಿಣ ಆಫ್ರಿಕಾ v/s ಇಂಗ್ಲೆಂಡ್
16 ಮಾರ್ಚ್ 2022 - ಇಂಗ್ಲೆಂಡ್ v/s ಟೀಂ ಇಂಡಿಯಾ
18 ಮಾರ್ಚ್ 2022 - ಕ್ವಾಲಿಫೈಯರ್ v/s ಕ್ವಾಲಿಫೈಯರ್
ಯೂನಿವರ್ಸಿಟಿ ಓವಲ್, ಡುನೆಡಿನ್
05 ಮಾರ್ಚ್ 2022 - ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
07 ಮಾರ್ಚ್ 2022 - ನ್ಯೂಜಿಲೆಂಡ್ v/s ಕ್ವಾಲಿಫೈಯರ್
09 ಮಾರ್ಚ್ 2022 - ಕ್ವಾಲಿಫೈಯರ್ v/s ಇಂಗ್ಲೆಂಡ್
ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
05 ಮಾರ್ಚ್ 2022 - ಆಸ್ಟ್ರೇಲಿಯಾ v/s ಇಂಗ್ಲೆಂಡ್
10 ಮಾರ್ಚ್ 2022 - ನ್ಯೂಜಿಲೆಂಡ್ v/s ಟೀಂ ಇಂಡಿಯಾ
12 ಮಾರ್ಚ್ 2022 - ಕ್ವಾಲಿಫೈಯರ್ v/s ಟೀಂ ಇಂಡಿಯಾ
14 ಮಾರ್ಚ್ 2022 - ಕ್ವಾಲಿಫೈಯರ್ v/s ಕ್ವಾಲಿಫೈಯರ್
17 ಮಾರ್ಚ್ 2022 - ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ
21 ಮಾರ್ಚ್ 2022 - ಕ್ವಾಲಿಫೈಯರ್ v/s ಕ್ವಾಲಿಫೈಯರ್
22 ಮಾರ್ಚ್ 2022 - ಟೀಂ ಇಂಡಿಯಾ v/s ಕ್ವಾಲಿಫೈಯರ್
ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್
13 ಮಾರ್ಚ್ 2022 - ನ್ಯೂಜಿಲೆಂಡ್ v/s ಆಸ್ಟ್ರೇಲಿಯಾ
15 ಮಾರ್ಚ್ 2022 - ಆಸ್ಟ್ರೇಲಿಯಾ v/s ಕ್ವಾಲಿಫೈಯರ್
22 ಮಾರ್ಚ್ 2022 - ದಕ್ಷಿಣ ಆಫ್ರಿಕಾ v/s ಆಸ್ಟ್ರೇಲಿಯಾ
24 ಮಾರ್ಚ್ 2022 - ದಕ್ಷಿಣ ಆಫ್ರಿಕಾ v/s ಕ್ವಾಲಿಫೈಯರ್
25 ಮಾರ್ಚ್ 2022 - ಕ್ವಾಲಿಫೈಯರ್ v/s ಆಸ್ಟ್ರೇಲಿಯಾ
27 ಮಾರ್ಚ್ 2022 - ಇಂಗ್ಲೆಂಡ್ v/s ಕ್ವಾಲಿಫೈಯರ್
30 ಮಾರ್ಚ್ 2022 - ಸೆಮಿ-ಫೈನಲ್ 1
ಈಡನ್ ಪಾರ್ಕ್, ಆಕ್ಲೆಂಡ್
19 ಮಾರ್ಚ್ 2022 - ಟೀಂ ಇಂಡಿಯಾ v/s ಆಸ್ಟ್ರೇಲಿಯಾ
20 ಮಾರ್ಚ್ 2022 - ನ್ಯೂಜಿಲೆಂಡ್ v/s ಇಂಗ್ಲೆಂಡ್
ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್
24 ಮಾರ್ಚ್ 2022 - ಇಂಗ್ಲೆಂಡ್ v/s ಕ್ವಾಲಿಫೈಯರ್
26 ಮಾರ್ಚ್ 2022 - ನ್ಯೂಜಿಲೆಂಡ್ v/s ಕ್ವಾಲಿಫೈಯರ್
27 ಮಾರ್ಚ್ 2022 - ಟೀಂ ಇಂಡಿಯಾ v/s ದಕ್ಷಿಣ ಆಫ್ರಿಕಾ
31 ಮಾರ್ಚ್ 2022 - 2ನೇ ಸೆಮಿ-ಫೈನಲ್ ಪಂದ್ಯ
03 ಎಪ್ರಿಲ್ 2022 - ಫೈನಲ್ ಪಂದ್ಯ
PublicNext
15/12/2020 07:16 pm