ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸ್ಫೋಟಕ ಬ್ಯಾಟಿಂಗ್‌ನಿಂದ ಬೃಹತ್ ಮೊತ್ತದ ಟಾರ್ಗೆಟ್ ತಲುಪಿದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ರೀತಿ ಸಿಡಿಸಿದ ಒಂದು ಸಿಕ್ಸ್ ಅದ್ಭುತವಾಗಿತ್ತು. ಆಂಡ್ರ್ಯೂ ಟೈ ಬೌಲಿಂಗ್‌ನಲ್ಲಿ ಕೊಹ್ಲಿ ತಮ್ಮ ಈ ಸ್ಕೂಪ್ ಶಾಟ್ ಬಳಕೆಗೆ ತಂದು ಥರ್ಡ್‌ಮ್ಯಾನ್ ವಿಭಾಗದಲ್ಲಿ ಚೆಂಡನ್ನು ಸಿಕ್ಸರ್ ಬಾರಿಸಿದರು.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ "ನಾನು ಬಾರಿಸಿದ ಸ್ಕೂಪ್ ನಿಜವಾಗಿಯೂ ಎಬಿಡಿ ಶಾಟ್ ಆಗಿತ್ತು. ಬೌಲರ್ ಟೈ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ನಾನು ಹಾರ್ದಿಕ್‌ಗೆ ಹೇಳಿದ್ದೆ. ಆಗ ಹಾರ್ದಿಕ್, ನಾನು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ ಎಂದರು. ಇಂದು ರಾತ್ರಿ ಎಬಿಡಿಗೆ ಟೆಕ್ಸ್ಟ್ ಮಾಡುತ್ತೇನೆ" ಎಂದು ಹೇಳಿದರು.
PublicNext
07/12/2020 10:35 am