ದುಬೈ: ಐಪಿಎಲ್ 2020 ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 200 ರನ್ ಚಚ್ಚಿದೆ. ಆದರೆ ನಾಯಕ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೆಟ್ಟ ದಾಖಲೆಯನ್ನು ಸರಿಗಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಗೋಲ್ಡನ್ ಡಕ್ ಔಟಾದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟಾಗಿ ಪೆವಿಲಿಯನ್ ಸೇರಿದ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ, ಹರ್ಭಜನ್ ಸಿಂಗ್ ಮತ್ತು ಪಾರ್ಥಿವ್ ಪಟೇಲ್ ತಲಾ 13 ಬಾರಿ ಡಕ್ ಔಟ್ ಆಗಿದ್ದಾರೆ.
PublicNext
05/11/2020 10:45 pm