ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL-2020 | ಕ್ವಾಲಿಫೈಯರ್-1: ಮುಂಬೈ-ಡೆಲ್ಲಿ ಹಣಾಹಣಿ

ದುಬೈ: ಕ್ವಾಲಿಫೈಯರ್-1 ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಕಾದಾಡಲಿವೆ.

ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಕಡೆ ಚಿತ್ತ ಹರಿಸಿವೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪರವಾಗಿ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ. ಡೆಲ್ಲಿಯಲ್ಲಿ ಹಿಂದಿನ ಪಂದ್ಯಕ್ಕಿಂತ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಸಂಭಾವ್ಯ ಆಟಗಾರರು:

ಮುಂಬೈ: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.

ಡೆಲ್ಲಿ: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ವಿಕೆ), ಮಾರ್ಕಸ್ ಸ್ಟೋಯಿನಿಸ್, ಆಕ್ಸಾರ್ ಪಟೇಲ್, ಆರ್ ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಕಾಗಿಸೊ ರಬಾಡ, ಅನ್ರಿಕ್ ನಾರ್ಟ್ಜೆ.

Edited By : Vijay Kumar
PublicNext

PublicNext

05/11/2020 03:31 pm

Cinque Terre

60.3 K

Cinque Terre

10

ಸಂಬಂಧಿತ ಸುದ್ದಿ