ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಒಂದು ದೊಡ್ಡ ಬ್ರ್ಯಾಂಡ್- ಪಾಕ್‌ ಆಟಗಾರರ ಬಗ್ಗೆ ಅಫ್ರಿದಿ ಕಳವಳ

ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ಬ್ರ್ಯಾಂಡ್ ಇದ್ದಂತೆ. ಇದರಲ್ಲಿ ಭಾಗವಹಿಸಲಾಗದೇ ಪಾಕಿಸ್ತಾನಿ ಆಟಗಾರರು ಒಂದು ದೊಡ್ಡ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಅಫ್ರಿದಿ, ಕ್ರಿಕೆಟ್‌ನಲ್ಲಿ ಐಪಿಎಲ್ ಒಂದು ದೊಡ್ಡ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ನಮ್ಮಲ್ಲಿ ಬಾಬರ್ ಅಜಮ್ ಸೇರಿದಂತೆ ಅನೇಕ ಆಟಗಾರರಿಗೆ ಅವಕಾಶ ಸಿಗಬೇಕಿತ್ತು. ಐಪಿಎಲ್‌ನಲ್ಲಿ ಭಾಗವಹಿಸಿ ಆ ಒತ್ತಡದಲ್ಲಿ, ವಿವಿಧ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವುದನ್ನು ಅವರು ಮಿಸ್ ಮಾಡುತ್ತಾರೆ. ನನ್ನ ಪ್ರಕಾರ ಪಾಕ್ ಆಟಗಾರರು ಐಪಿಎಲ್ ಆಡದೇ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ನನಗೆ ಭಾರತದಲ್ಲೂ ಅನೇಕ ಜನ ಅಭಿಮಾನಿಗಳು ಇದ್ದಾರೆ. ಭಾರತದಲ್ಲಿ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿದ್ದೇನೆ. ಭಾರತದ ಜನರು ನನಗೆ ಯಾವಗಲೂ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ. ಇಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಸಂದೇಶ ಕಳುಹಿಸುತ್ತಾರೆ. ನಾನೂ ಕೂಡ ಅವರಿಗೆ ರಿಪ್ಲೈ ಮಾಡಿದ್ದೇನೆ. ಭಾರತದಲ್ಲಿ ನನ್ನ ಒಟ್ಟಾರೆ ಅನುಭವ ಬಹಳ ಚೆನ್ನಾಗಿದೆ ಎಂದು ತಿಳಿಸಿದರು.

Edited By : Vijay Kumar
PublicNext

PublicNext

27/09/2020 05:56 pm

Cinque Terre

49.97 K

Cinque Terre

3

ಸಂಬಂಧಿತ ಸುದ್ದಿ