ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಂಪಿಯನ್ಸ್ ಟ್ರೋಫಿ ಪ್ರದರ್ಶನಕ್ಕೆ ಮುಂದಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ !

ಇಸ್ಲಾಮಾಬಾದ್ : 2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನಾನಾ ಅಡೆತಡೆಗಳು ಎದುರಾಗುತ್ತಿವೆ. ಈ ಐಸಿಸಿ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಹೋಗಲು ಭಾರತ ತಂಡಕ್ಕೆ ಅನುಮತಿ ಸಿಕ್ಕಿಲ್ಲ. ಇತ್ತ ಪಾಕಿಸ್ತಾನ ಕೂಡ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪುತ್ತಿಲ್ಲ. ಈ ನಡುವೆ ಪಾಕ್ ಟ್ರೋಫಿ ಟೂರ್ ಆರಂಭಗೊಂಡಿದೆ.

ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ಬಿಸಿಸಿಐ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದೆ. ಈ ಬಗ್ಗೆ ಪಿಸಿಬಿ ಐಸಿಸಿಯಿಂದ ಪ್ರತಿಕ್ರಿಯೆ ಕೇಳಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಐಸಿಸಿಯು ಚಾಂಪಿಯನ್ಸ್ ಟ್ರೋಫಿಯನ್ನು ದೇಶದೆಲ್ಲೆಡೆ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಇಸ್ಲಾಮಾಬಾದ್, ತಕ್ಷಿಲಾ ಮತ್ತು ಖಾನ್‌ಪುರವನ್ನು ದಾಟಿ ಹೆಚ್ಚಿನ ಪಾಕಿಸ್ತಾನಿ ನಗರಗಳಲ್ಲಿ ಸಂಚರಿಸುತ್ತಿದೆ. ಇದೀಗ ಟ್ರೋಪಿ ಪ್ರದರ್ಶನದ ವಿಡಿಯೋ ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ನವೆಂಬರ್ 14 ರಂದು ಇಸ್ಲಾಮಾಬಾದ್ ತಲುಪಿದೆ. ಈಗ ನವೆಂಬರ್ 19 ರಿಂದ ನವೆಂಬರ್ 24 ರವರೆಗೆ ಅಭಿಮಾನಿಗಳ ನಡುವೆ ಪಾಕಿಸ್ತಾನದ ವಿವಿಧ ಸ್ಥಳಗಳಿಗೆ ಟ್ರೋಫಿಯನ್ನು ಪ್ರದರ್ಶನ ನಡೆಯಲಿದೆ.

ಪಾಕಿಸ್ತಾನದಲ್ಲಿ ಪ್ರದರ್ಶನಗೊಂಡ ಬಳಿಕ ಟ್ರೋಫಿಯು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ದೇಶಕ್ಕೆ ಹೊಗಲಿದ್ದು, ಜನವರಿ 15 ರಿಂದ 26 ರವರೆಗೆ ಭಾರತಕ್ಕೆ ಬರಲಿದೆ. ಹಾಗೆ ಜನವರಿ 27 ರಂದು ಪಾಕಿಸ್ತಾನದಲ್ಲಿ ಟ್ರೋಪಿ ಪ್ರವಾಸ ಅಂತಿಮವಾಗಲಿದೆ.

ಸಾಮಾನ್ಯವಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕನಿಷ್ಠ 100 ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ. ಇದರ ನಂತರವೇ ಟ್ರೋಫಿಯ ಪ್ರದರ್ಶನ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಐಸಿಸಿ ಕೈಹಾಕಿದೆ.

ಐಸಿಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಯಾವುದೇ ಅಧಿಕೃತ ಪಂದ್ಯಾವಳಿಯ ವೇಳಾಪಟ್ಟಿಯಿಲ್ಲದೆ ಟ್ರೋಫಿಯ ಪ್ರದರ್ಶನ ನಡೆಯಲಿದೆ. ಸಾಮಾನ್ಯವಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕನಿಷ್ಠ 100 ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ. ಇದರ ನಂತರವೇ ಟ್ರೋಫಿಯ ಪ್ರದರ್ಶನ ಪ್ರಾರಂಭವಾಗಿದೆ.

Edited By :
PublicNext

PublicNext

20/11/2024 01:18 pm

Cinque Terre

119.89 K

Cinque Terre

1