ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL-2020 : ಡೆಲ್ಲಿ ವಿರುದ್ಧ ಮುಗ್ಗರಿಸಿದ RCB ಪ್ಲೇ ಆಫ್ ಕನಸು ಜೀವಂತ

ಅಬುಧಾಬಿ: ಪ್ಲೇ ಆಫ್ ಹಂತಕ್ಕಾಗಿ DC vs RCB ಮಧ್ಯೆ ನಿನ್ನೆ ನೇರ ಹಣಾಹಣಿ ನಡೆಯಿತು. ತುರುಸಿನ ಪಂದ್ಯದಲ್ಲಿ ಡೆಲ್ಲಿ ದಾಳಿಗೆ ಆರ್ ಸಿ ಬಿ ತತ್ತರಿಸಿ ಸೋಲನ್ನು ಸ್ವಾಗತಿಸಿದೆ.

ಸೋತ ಆರ್ ಸಿ ಬಿ ಗೆ ಅದೃಷ್ಟವೆಂಬಂತೆ ಪ್ಲೇ ಆಫ್ ಗೆ ಹೋಗಲು ಅವಕಾಶವೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಅಂತರದ ಸೋಲು ಅನುಭವಿಸಿತು.

ಆದರೂ 19ನೇ ಓವರ್ ನ ಮುಕ್ತಾಯದವರೆಗೆ ಸೋಲೊಪ್ಪಿಕೊಳ್ಳದಿರುವುದಕ್ಕೆ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.

ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು.

ಆರ್ ಸಿಬಿ ನೀಡಿದ್ದ ಗುರಿ ಬೆನ್ನತ್ತಿದ ಡೆಲ್ಲಿ ತಂಡ 19ನೇ ಓವರ್ ನ ಕೊನೆಯ ಎಸೆತದಲ್ಲಿ 154 ರನ್ ಗಳಿಸಿತು.

ಒಂದು ವೇಳೆ ಡೆಲ್ಲಿ ತಂಡ 18.2 ಓವರ್ ಆಗುವಷ್ಟರಲ್ಲಿ ಗುರಿ ಮುಟ್ಟಿದ್ದಿದ್ದರೆ, ಆರ್ ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತಿತ್ತು ಮತ್ತು ಮುಂದಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗಿತ್ತು.

ಆದರೆ, ಮುಂಬೈ ಇಂಡಿಯನ್ಸ್ 18 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಡೆಲ್ಲಿ 16 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಆರ್ ಸಿಬಿ ಮತ್ತು ಕೆಕೆಆರ್ ತಲಾ 7 ಜಯದೊಂದಿಗೆ 14 ಪಾಯಿಂಟ್ಸ್ ಗಳನ್ನು ಹೊಂದಿವೆಯಾದರೂ, ಆರ್ ಸಿಬಿ ರನ್ ರೇಟ್ ಕೆಕೆಆರ್ ಗಿಂತ ಉತ್ತಮವಾಗಿರುವುದರಿಂದ ಮೂರನೇ ಸ್ಥಾನದಲ್ಲಿ ಉಳಿದಿದೆ.

ಹೀಗಾಗಿ ಆರ್ ಸಿ ಬಿ ಪ್ಲೇ ಆಫ್ ಕನಸು ಜೀವಂತವಾಗಿದೆ.

Edited By : Nirmala Aralikatti
PublicNext

PublicNext

03/11/2020 08:41 am

Cinque Terre

50.69 K

Cinque Terre

3

ಸಂಬಂಧಿತ ಸುದ್ದಿ