ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್: ಪಂಜಾಬ್‌ಗೆ ಗೆಲುವಿನ ಸಂಭ್ರಮ!

ದುಬೈ(ಅ.18): ಸೂಪರ್ ಸಂಡೆಯ ಎರಡೂ ಪಂದ್ಯ ಟೈನಲ್ಲಿ ಅಂತ್ಯ. ಹೀಗಾಗಿ ಎರಡೂ ಪಂದ್ಯದಲ್ಲಿ ಸೂಪರ್ ಓವರ್ ಮ್ಯಾಚ್. ಆದರೆ 2ನೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್. ಹೌದು. ಇದು ಅಪರೂಪ. ಮುಂಬೈ ಹಾಗೂ ಪಂಜಾಬ್ ಪಂದ್ಯ ಟೈ ಆದರ ಕಾರಣ, ಸೂಪರ್ ಓವರ್ ಮಾಡಲಾಯಿತು. ಮೊದಲ ಸೂಪರ್ ಕೂಡ ಟೈನಲ್ಲಿ ಅಂತ್ಯಗೊಂಡಿತು. ಹೀಗಾಗಿ 2ನೇ ಸೂಪರ್ ಓವರ್ ಮಾಡಲಾಯಿತು.

2ನೇ ಸೂಪರ್ ಓವರ್‌ನಲ್ಲಿ ಕೀರನ್ ಪೋಲಾರ್ಡ್ ಅಬ್ಬರಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ 11 ರನ್ ಸಿಡಿಸಿತು. ಚೇಸ್ ಮಾಡಲು ಕಣಕ್ಕಿಳಿದ ಪಂಜಾಬ್ ತಂಡದ ಕ್ರಿಸ್ ಗೇಲ್ ಸಿಕ್ಸರ್ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಬೌಂಡರಿ ಸಿಡಿಸಿದರು. 4ನೇ ಎಸೆತದಲ್ಲಿ ಮಯಾಂಕ್ 1 ರನ್ ಸಿಡಿಸೋ ಮೂಲಕ ಪಂಜಾಬ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಹಾಗೂ ಅತ್ಯಂತ ರೋಚಕ ಗೆಲುವು ದಾಖಲಿಸಿತು.

ನಿಯಮ:

ಸೂಪರ್ ಓವರ್‌ನಲ್ಲಿ ಔಟಾದ ಬ್ಯಾಟ್ಸ್‌ಮನ 2ನೇ ಸೂಪರ್ ಓವರ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ

ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ ಆಟಗಾರರು 2ನೇ ಸೂಪರ್ ಓವರ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ

Edited By : Raghavendra K G
PublicNext

PublicNext

19/10/2020 12:20 am

Cinque Terre

69.92 K

Cinque Terre

15

ಸಂಬಂಧಿತ ಸುದ್ದಿ