ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಪ್ರಜಾಪ್ರಭುತ್ವವನ್ನು ಉಳಿಸಲು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಇತ್ತೀಚಿನ ರಾಜ್ಯ ಹಾಗೂ ಕೇಂದ್ರದ ರಾಜಕಾರಣ ಸ್ವಹಿತಕ್ಕಾಗಿ ನಡೆಯುತ್ತಿದೆ. ಪಕ್ಷಾಂತರ ಮಾಡುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ಶಾಸಕರನ್ನು ಗೆಲ್ಲಿಸುವುದು ಜನರು. ಆದರೆ ಇವರು ಜನರ ಭಾವನೆಗಳಿಗೆ ವಿರುದ್ಧವಾಗಿತಮ್ಮ ವೈಯಕ್ತಿ ಲಾಭಕ್ಕಾಗಿ, ಹಣದ ದುರಾಸೆಗೆ ಬಲಿಯಾಗಿ ಪಕ್ಷಾಂತರ ಮಾಡುತ್ತಿದ್ದಾರೆ. ಆದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಕಟ್ಟಿನಿಟ್ಟಾಗಿ ಜಾರಿಗೆ ತರಬೇಕು. ಪಕ್ಷಾಂತರದ ಕಾರಣದಿಂದ ಮರು ಚುನಾವಣೆಗಳು ಆಗುವುದನ್ನು ತಡೆಗಟ್ಟಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರಾಜ್ಯದಲ್ಲಿ ಅನೇಕ ಶಾಸಕರು ಪಕ್ಷಾಂತರ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ, ಗುಬ್ಬಿ ಕ್ಷೇತ್ರದ ಜೆಡಿಎಸ್. ಶಾಸಕ ಅವರಿಗೆ ಆಮಿಷ ಒಡ್ಡಿದ ವೀಡಿಯೋ ಕೂಡು ಬಹಿರಂಗವಾಗಿದೆ. ಲೋಕಾಯುಕ್ತರಿಗೆ ದೂರು ನೀಡಿದ್ದು, ಪ್ರಕರಣ ಕೂಡ ದಾಖಲಾಗಿತ್ತು, ಈ ಘಟನೆ ನಡೆದು 12 ವರ್ಷಗಳಾದರೂ ಇನ್ನೂ ವಿಚಾರಣೆ ನಡೆಯುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ, ಸಭಾಪತಿಗಳು ಸೇರಿ ಕೂಡಲೇ ಪಕ್ಷಾಂತರ ಕಾಯಿದೆಯನ್ನು ನಿಷೇಧಿಸಬೇಕು. ಶಾಸಕ ಸ್ಥಾನಕ್ಕೆ ಅಕಸ್ಮಾತ್ ರಾಜೀನಾಮೆ ನೀಡಿದರೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಆ ಅವಧಿಯಲ್ಲಿ ಅವಕಾಶ ಕೊಡಬಾರದು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ ಹಾಗಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ನಯನರಾಜು, ದೇವೇಂದ್ರಪ್ಪ, ಸಂತೋಷ್, ಪುಷ್ಪಾ ಇದ್ದರು.

Edited By : Nagesh Gaonkar
PublicNext

PublicNext

11/10/2022 06:03 pm

Cinque Terre

24.34 K

Cinque Terre

1

ಸಂಬಂಧಿತ ಸುದ್ದಿ