ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಆಜಾನ್ ವಿರುದ್ಧ ಕಹಳೆ; ಆಜಾನ್‌ಗೆ ಬ್ರೇಕ್ ಹಾಕುಲು ಶ್ರೀರಾಮಸೇನೆ ಮನವಿ

ರಾಜ್ಯದಲ್ಲಿ ಈ ಹಿಂದೆ ಆಜಾನ್ ವರ್ಸಸ್ ಹನುಮಾನ್‌ ಚಾಲೀಸ್, ಹಿಜಾಬ್ ವರ್ಸಸ್‌ ಕೇಸರಿ ಶಾಲು ಸೇರಿದಂತೆ ಅನೇಕ ಧರ್ಮ ದಂಗಲ್ ನಡೆದವು. ಇನ್ನೆನು‌ ಎಲ್ಲವೂ ತಣ್ಣಗಾಯಿತು‌ ಅನ್ನುವಷ್ಟರಲ್ಲಿಯೇ ಇದೀಗ ಮುದ್ರಣ ಕಾಶಿ ಗದಗನಲ್ಲಿ ಆಜಾನ್ ವಿರುದ್ಧ ಶ್ರೀರಾಮಸೇನೆ ಸಂಘಟನೆ ಮತ್ತೇ ಧ್ವನಿ ಎತ್ತಿದೆ.

ಹೌದು..ಗದಗ ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ಆಜಾನ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು‌ ಅವರಿಗೆ ಮನವಿ‌ ಸಲ್ಲಿಸಿದ್ದಾರೆ. ಅನಧಿಕೃತ ಹಾಗೂ ಕರ್ಕಶ ಧ್ವನಿ ವರ್ಧಕಕ್ಕೆ ಕಡಿವಾಣ ಹಾಕುವಂತೆ ಮನವಿ‌ ಮಾಡಿದ್ದಾರೆ. ಗದಗನ ಎಸ್.ಪಿ ಕಚೇರಿಗೆ ತೆರಳಿ ಶ್ರೀರಾಮಸೇನೆ ಕಾರ್ಯಕರ್ತರು ಮನವಿ‌ ಸಲ್ಲಿಸಿದ್ದಾರೆ.ಆಜಾನ್ ಕೂಗುವ ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡ್ತಿರುವ ಆರೋಪ ಇವರದಾಗಿದ್ದು,ಸರ್ಕಾರದ ಆದೇಶದಂತೆ ಡೆಸಿಬಲ್ ಕಡ್ಡಾಯಗೊಳಿಸಬೇಕು.

ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ ಪಡಿಸಿದ್ದಾರೆ. ಇನ್ನು ಇಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು ಆದಷ್ಟು ಬೇಗ ಕರ್ಕಶ ಆಜಾನ್‌ಗೆ ಬ್ರೇಕ್ ಹಾಕದಿದ್ರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.

Edited By :
PublicNext

PublicNext

23/08/2022 03:43 pm

Cinque Terre

119.09 K

Cinque Terre

10

ಸಂಬಂಧಿತ ಸುದ್ದಿ