ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂಕ್ತ ಮೀಸಲಾತಿಗಾಗಿ ಹಲವರ ಪಟ್ಟು.. ನಿಭಾಯಿಸಲು ಹೋದರೆ ಸರ್ಕಾರಕ್ಕೆ ಭಾರೀ ಪೆಟ್ಟು...

ವಿಶ್ಲೇಷಣೆ-- ಪ್ರವೀಣ ನಾರಾಯಣ ರಾವ್...

ಬೆಂಗಳೂರು: ಅಂತೂ ಇಂತೂ ಸರ್ಕಾರ ಎಸ್. ಸಿ.‌ ಎಸ್. ಟಿ. ಜನಾಂಗದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸುವುದರೊಂದಿಗೆ..

ಬಹು ದಿನಗಳಿಂದ ಸದರಿ ಜನಾಂಗದವರು ನಡೆಸುತ್ತಿದ್ದ ಹೋರಾಟವನ್ನು ತಮಣಿ ಮಾಡಿದೆ‌. ಜೊತೆಗೆ ಶಹಬ್ಬಾಸ್ ಗಿರಿಯನ್ನೂ ಗಿಟ್ಟಿಸಿದೆ.. ಆದರೆ...?

ಇಷ್ಟಕ್ಕೇ ಬೊಮ್ಮಾಯಿಯವರ ಸರ್ಕಾರ ಖುಷಿ ಪಡಬೇಕಾಗಿಲ್ಲ.. ಇದರ ಹಿಂದೆಯೇ ಸಾಲು ಸಾಲು ಜನಾಂಗದವರು ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪಟ್ಟು ಹಿಡಿದು ಕುಳಿತಿವೆ.. ಅದರಲ್ಲೂ ಪಂಚಮಸಾಲಿ ಲಿಂಗಾಯಿತರ ಹೋರಾಟವಂತೂ ತಾರಕಕ್ಕೇರಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ...

ಒಂದು ಕಡೆ ಒಕ್ಕಲಿಗರು ಇನ್ನೊಂದೆಡೆ ಕುರುಬರು, ಈಡಿಗರು, ಬಿಲ್ಲವರು ಎಲ್ಲರೂ ತಮ್ಮ ಹಕ್ಕು ಪ್ರತಿಪಾದನೆ ಮಾಡಲು ಹೋರಾಟದ ಹಾದಿ ಹಿಡಿದು ಬಿಟ್ಟಿದ್ದಾರೆ.. ಎಲ್ಲರನ್ನೂ ಸಮಾಧಾನ ಪಡಿಸುವುದೇ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.‌‌.. ಈ ಕುರಿತ ವರದಿ ಇಲ್ಲಿದೆ....

Edited By : Somashekar
PublicNext

PublicNext

11/10/2022 08:28 pm

Cinque Terre

103.53 K

Cinque Terre

5

ಸಂಬಂಧಿತ ಸುದ್ದಿ