ತಮಿಳುನಾಡು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೈಲಾಪುರ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಹೌದು ಚೆನ್ನೈನ ಮಾರುಕಟ್ಟೆಯಲ್ಲಿ ಜನಸಾಮಾನ್ಯರಂತೆ ತೆರಳಿದ ನಿರ್ಮಲಾ ಸೀತಾರಾಮನ್ ತಾಜಾ ತರಕಾರಿಗಳನ್ನು ಆಯ್ದು ಖರೀದಿಸಿದ್ದಾರೆ. ಜೊತೆಗೆ ತರಕಾರಿ ವ್ಯಾಪಾರಸ್ಥರು ಮತ್ತು ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇನ್ನು ನಿರ್ಮಲಾ ಅವರ ಸರಳತೆ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
08/10/2022 10:32 pm