ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯಲ್ಲಿ ಕಂದಮ್ಮನ ಮನದಾಳದ ಮಾತು ಕೇಳಿ ಭಾವುಕರಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿಯ ಮುಖಂಡರಾದ ಶಕುಂತಲ, 'ಶಿವಕುಮಾರಣ್ಣ ಅಳ್ಬೇಡ ಸುಮ್ಕಿರಣ್ಣ' ಎಂದು ಬರದುಕೊಂಡಿದ್ದಾರೆ. ಅವರ ಈ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗಿದೆ.
ಡಿಕೆಶಿ ಕಣ್ಣೀರು ಹಾಕಿದ್ಯಾಕೆ?:
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೇ 2 ರ ಮಧ್ಯರಾತ್ರಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಜೊತೆ ಸಂವಾದ ನಡೆದಿತ್ತು. ಈ ವೇಳೆ ಮಾತನಾಡಿದ್ದ ಬಾಲಕಿ, ನನ್ನ ತಂದೆ ನನಗೆ ಪೆನ್ಸಿಲ್ ಕೊಡಿಸುತ್ತಿದ್ದರು. ಬೇಕೆಂದಾಗ ಚಾಕೊಲೇಟ್ ಕೊಡಿಸುತ್ತಿದ್ದರು, ಡಾಕ್ಟರ್ಗಳು ನಮ್ಮ ಅಪ್ಪನನ್ನು ಸಾಯಿಸಿಬಿಟ್ರು. ನಾನು ಡಾಕ್ಟರ್ ಆಗ್ತೀನಿ. ಜನರ ಜೀವ ಉಳಿಸ್ತೀನಿ ಎಂದಿದ್ದರು. ಬಾಲಕಿಯ ಮಾತನ್ನು ಇಂಗ್ಲಿಷ್ಗೆ ತರ್ಜುಮೆ ಡಿಕೆಶಿ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಖುದ್ದು ಕಣ್ಣೀರು ಹಾಕಿದ್ದಾರೆ.
PublicNext
01/10/2022 11:01 pm