ಆಡಳಿತ ಸರ್ಕಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ವಾಕ್ಸಮರ್ ಚರ್ಚೆಗೆ ಕಾರಣವಾಗಿರುವ ಪೇ ಸಿಎಂ ಪೋಸ್ಟರ್'ನಿಂದಾಗಿ ಬೊಮ್ಮಾಯಿ ಸರಕಾರ ತೀವ್ರ ಮುಜುಗರಕ್ಕೀಡಾಗಿದೆ.
ಈ ಸಂಬಂಧ ಪೊಲೀಸ್ ಗ ಕಾರ್ಯಾಚರಣೆ ನಡೆದರೂ ಪೇ ಸಿಎಂ ಪೋಸ್ಟರ್ ರಾಜ್ಯದೆಲ್ಲಡೆ ಮನೆ ಮಾತಾಗಿದೆ. ಕಾಂಗ್ರೆಸ್ ಹೂಡಿದ ಈ ದಾಳದ ಸುಳಿವು ಸಿಗದೇ ಬೊಮ್ಮಾಯಿ ಸರ್ಕಾರ ಜನಸಾಮಾನ್ಯರ ಎದುರಿಗೆ ಪೇಚಿಗೆ ಸಿಲುಕಿದ್ದು ಒಂದು ಕಡೆಯಾದರೆ, ಹೈಕಮಾಂಡ್ ಕೂಡಾ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡು ದಾಳಿವು ಸುಳಿವು ಯಾಕೆ ಸಿಗಲಿಲ್ಲಾ ಎನ್ನುತ್ತಿದೆ.
ಸದ್ಯ ಪ್ರಸಕ್ತ ಚುನಾವಣಾ ವರ್ಷವಾಗಿರುವುದರಿಂದ ಯಾವುದೇ ಸಂಭಾವ್ಯ ಆರೋಪದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಸೂಚನೆಯ ನಡುವೆಯೂ ಬಿಜೆಪಿಗೆ ಪೇಸಿಎಂ ಪೋಸ್ಟರ್ ತೀವ್ರ ಹಿನ್ನಡೆ ತಂದಿದೆ.
ಪೇಸಿಎಂ ಪೋಸ್ಟರ್ ಪಕ್ಷದ ಅಧಿಕೃತ ಕಾರ್ಯಕ್ರಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಂದು ಕಡೆ, ಇದೊಂದು ಆರೋಗ್ಯಕರ ರಾಜಕೀಯ, ಇದರಲ್ಲಿ ತಪ್ಪೇನಿಲ್ಲ. ಈ ಪೋಸ್ಟರ್ ಅನ್ನು ನಾವೇ ಮುಂದೆ ನಿಂತು ಹಾಕುತ್ತೇವೆ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಬಿಜೆಪಿ ಘಟಕದ ವಿರುದ್ದ ಹೈಕಮಾಂಡ್ ಕೆಂಡಾಮಂಡಲವಾಗಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ತಮ್ಮ ಸುಪರ್ದಿಯಲ್ಲಿ ಇದ್ದರೂ, ಯಾಕೆ ? ಈ ಕಾಂಗ್ರೆಸ್ಸಿನ ದಾಳದ ಸೂಚನೆ ಬಿಜೆಪಿಗೆ ಸಿಗಲಿಲ್ಲ. ಪೂರ್ವತಯಾರಿ ಇಲ್ಲದೇ ಕಾಂಗ್ರೆಸ್ ಇಂತಹ ದೊಡ್ಡ ಶಿಸ್ತುಬದ್ದವಾದ ಕ್ಯಾಂಪೇನ್ ಅನ್ನು ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಗುಪ್ತಚರ ವೈಫಲ್ಯ ಕಂಡಿದ್ದು ಯಾಕೆ ಅಥವಾ ಇಲಾಖೆ ವರದಿಯನ್ನು ನೀಡಿದ್ದರೂ ಸರಕಾರ ಕಡೆಗಣಿಸಿತೇ ಎನ್ನುವ ವರದಿಯನ್ನು ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂಬ ಚರ್ಚೆ ಮಾತುಗಳು ಕೇಳಿ ಬಂದಿವೆ.
PublicNext
24/09/2022 04:15 pm