ಬೆಂಗಳೂರು - ಸರ್ಕಾರದ ವಿರುದ್ಧ ಸಿದ್ದು ಸರಣಿ ಟ್ವೀಟ್ ನಡೆಸಿದ್ದಾರೆ. ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಸಹಜ. ಇದನ್ನ ಇಷ್ಟೊಂದು ಕೀಳುಮಟ್ಟಕ್ಕೆ ಕೊಂಡೊಯ್ದಿದ್ದೀರ. ಕೀಳುಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ನಿಮ್ಮದು. ಸಿಎಂ ಅವರೇ ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ರಿ. ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ? ಬಿಜೆಪಿಸೋಶಿಯಲ್ ಮಿಡಿಯಾದಲ್ಲಿ ಏನೇನೆಲ್ಲಾ ಬಂದಿದೆ.
ನನ್ನ ವಿರುದ್ಧ ಕುತ್ಸಿತ ಹೇಳಿಕೆ ಹಾಕಿದ್ದೀರ. ವಿರೂಪಗೊಳಿಸಿದ ಫೋಟೋ ವಿವರ ಕೊಡ್ತೇನೆ. ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಇದ್ರ ಬಗ್ಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ. ನಾನೇ ಲಂಚ ಗುಳಿತನದ ಬಗ್ಗೆ ಪೋಸ್ಟರ್ ಅಂಟಿಸ್ತೇನೆ. ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇನ್ನೂ ನನ್ನ, ಡಿಕೆ ಬಗ್ಗೆ ಪೋಸ್ಟರ್ ಅಂಟಿಸಿದ್ದಾರಲ್ಲಾ? ಅದರ ಬಗ್ಗೆಯೂ ಯಾಕೆ ಮೌನವಾಗಿದ್ದೀರ. ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
22/09/2022 06:23 pm