ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಎಪಿಯನ್ನ ಕೃಷ್ಣನಿಗೆ ಹೋಲಿಸಿದ ಕೇಜ್ರಿವಾಲ್

ನವದೆಹಲಿ: "ಕೆಟ್ಟತನವನ್ನು ಕೊನೆಗೊಳಿಸಲು ಶ್ರೀಕೃಷ್ಣ ಕಳಿಸಿದಂತೆ, ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗವನ್ನು ಕೊನೆಗೊಳಿಸಲು ಮತ್ತು ಸಂವಿಧಾನ ಮತ್ತು ದೇಶವನ್ನು ದುಷ್ಟರಿಂದ ರಕ್ಷಿಸಲು ದೇವರು ಎಎಪಿಯನ್ನು ಕಳುಹಿಸಿದ್ದಾನೆ ಎಂದು ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾನುವಾರ ನಡೆದ ಎಎಪಿಯ ಮೊದಲ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಈ ಸಮಾವೇಶದಲ್ಲಿ ಸುಮಾರು 20 ರಾಜ್ಯಗಳಿಂದ ಎಎಪಿಯ ಸುಮಾರು 1,500 ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

Edited By : Vijay Kumar
PublicNext

PublicNext

18/09/2022 08:10 pm

Cinque Terre

54.91 K

Cinque Terre

9

ಸಂಬಂಧಿತ ಸುದ್ದಿ