ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೇಕೆದಾಟು, ಸಿದ್ದರಾಮೋತ್ಸವ ಬಳಿಕ ಮತ್ತೊಂದು ಯಾತ್ರೆ

ಬೆಂಗಳೂರು: ಮತ್ತೊಂದು ಮೆಗಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ .ಚುನಾವಣೆಗೂ ಮುನ್ನ ಅಲೆ ಎಬ್ಬಿಸಲು ಕಾಂಗ್ರೆಸ್​ ಪ್ಲಾನ್​ ಮಾಡಿದೆ. ಸಿದ್ದು ಉತ್ಸವ ಆಯ್ತು, ಈಗ ಬಸ್​ ಯಾತ್ರೆಗೆ ರೆಡಿಮಾಡಿಕೊಳ್ತಿದೆ.

SM ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ರಥಯಾತ್ರೆಯನ್ನ 3 ತಿಂಗಳಲ್ಲಿ 224 ಕ್ಷೇತ್ರಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಬಸ್​ ಯಾತ್ರೆಗೆ ಐಷಾರಾಮಿ ಕ್ಯಾರವಾನ್​ ರೆಡಿಯಾಗಿದೆ. ಅಕ್ಟೋಬರ್​ ಅಥವಾ ನವೆಂಬರ್​ನಲ್ಲಿ ಬಸ್​ ರಥಯಾತ್ರೆ ಹಮ್ಮಿಕೊಳ್ಳಲಾಗುತ್ತೆ. ಸಿದ್ದು ಆಪ್ತ ಶಾಸಕರಿಂದ ಬೇಡಿ, ಸಿದ್ದತೆಯೂ ಆರಂಭವಾಗಲಿದೆ. ಇದೇ ವಿಷಯವಾಗಿ ರಾಹುಲ್​ ಗಾಂಧಿಯನ್ನ ಸಿದ್ದು ಭೇಟಿಯಾಗಿ ಅನುಮತಿ ಪಡೆಯಲಿದಾರೆ.

ಬಳ್ಳಾರಿ ಪಾದಯಾತ್ರೆ ರೀತಿ ಸಕ್ಸಸ್​ಗೆ ಸಿದ್ದು ಬಣದ ಸಿದ್ಧತೆ ನಡೆಸಿದೆ.ಡಿಕೆಶಿ, ಎಂ.ಬಿ.ಪಾಟೀಲ್​ ಸೇರಿ ಎಲ್ಲರಿಗೂ ಕೂಡ ಈಗಾಗಲೇ ಆಹ್ವಾನ ನೀಡಲಾಗಿದೆ.ಮಿತ್ಸುಬಿಷಿ ಸಂಸ್ಥೆಯ ವಿಶೇಷ ಕ್ಯಾರವಾನ್​ ರೆಡಿ ಮಾಡಿದೆ.ವಾಹನದ ಮೇಲೆ ನಿಂತು ಮಾತನಾಡುವ ವ್ಯವಸ್ಥೆ ಬಸ್ ನಲ್ಲಿ ಇದ್ದು,ಸಿದ್ದರಾಮೋತ್ಸವ ಮಾಡಿದ ತಂಡದಿಂದಲೇ ಹೊಸ ಯಾತ್ರೆ ಶುರುವಾಗಲಿದೆ. ಡಿಕೆಶಿ, ಸಿದ್ದು ಸೇರಿ ಕಾಂಗ್ರೆಸ್​ ನಾಯಕರು ಒಟ್ಟಿಗೆ ಸಂಚಾರ ಬಸ್​ ಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ರಾಹುಲ್​ ಗಾಂಧಿ ಒಪ್ಪಿಗೆಯೊಂದೇ ಬಾಕಿ ಉಳಿದಿದೆ.

Edited By : Abhishek Kamoji
PublicNext

PublicNext

18/09/2022 04:41 pm

Cinque Terre

126.52 K

Cinque Terre

6

ಸಂಬಂಧಿತ ಸುದ್ದಿ