ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್ ಮೋದಿ ಬಳಿಕ ಸೋನಿಯಾ ಪ್ರಧಾನಿ

2023ರ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಈಗಾಗಲೇ ತಯಾರಿ ನಡೆಸಿವೆ. ಅದೇ ರೀತಿ ಆಮ್ ಆದ್ಮಿ ಪಕ್ಷವು ಪ್ರಚಾರ ಕಾರ್ಯ ನಡೆಸಿದೆ.

ಸದ್ಯ ಚುನಾವಣಾ ಪ್ರಚಾರದ ಭಾಗವಾಗಿ ಗುಜರಾತ್ ನ ಕೆಲ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಿದ ದೆಹಲಿ ಸಿಎಂ ಕೇಜ್ರಿವಾಲ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗುಜರಾತ್ ನಲ್ಲಿ ಕೆಲ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ.

ಆ ಭಾಗದ ಯಾವೊಬ್ಬ ಶಾಸಕರೂ ಕೂಡ ನನ್ನ ಹಾಗೆ ಮತ ಕೇಳಲು ಬರುವುದಿಲ್ಲ. ಇದು ಬಿಜೆಪಿಗರ ದುರಹಂಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.ಬಿಜೆಪಿಯಲ್ಲಿ ದುರಹಂಕಾರದ ಜನರೇ ತುಂಬಿಕೊಂಡಿದ್ದಾರೆ. ಅವರಿಗೇಕೆ ನೀವು ಮತ ನೀಡಬೇಕು. ಅವರಂತೆ ನಾನು ದುರಹಂಕಾರಿಯಲ್ಲ. ನಾನು ಸಾಮಾನ್ಯ ಮನುಷ್ಯ. ಜನರ ನಡುವೆ ಬದುಕುತ್ತಿದ್ದೇವೆ. ಜನಸಾಮಾನ್ಯರ ಸಂಕಷ್ಟಗಳನ್ನು ಅರಿಯಬಲ್ಲೆ. ಇದು ಬಿಜೆಪಿಗರಿಂದ ಸಾಧ್ಯವಿಲ್ಲ ಎಂದರು.

ಇದೇ ವೇಳೆ ಪತ್ರಕರ್ತರ ಪ್ರಶ್ನೆವೊಂದಕ್ಕೆ ಉತ್ತರಿಸಿದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿಯೇ ಯೋಜಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಗರೇ ಈ ಬಗ್ಗೆ ಹೇಳಿದ್ದಾರೆ. ಅವರನ್ನೂ ಈ ಬಗ್ಗೆ ಪ್ರಶ್ನಿಸಿ ನೋಡಿ ಎಂದು ಪತ್ರಕರ್ತರಿಗೇ ಮರು ಪ್ರಶ್ನೆ ಹಾಕಿದರು.ನೀವು ಬಿಜೆಪಿ ಸಭೆಗೆ ಹೋದಾಗ ಈ ಪ್ರಶ್ನೆಗಳನ್ನು ಅವರ ಬಳಿಯೇ ಕೇಳಿ ತಿಳಿದುಕೊಳ್ಳಿ ಎಂದರು.

Edited By : Nirmala Aralikatti
PublicNext

PublicNext

13/09/2022 08:25 pm

Cinque Terre

106.18 K

Cinque Terre

37

ಸಂಬಂಧಿತ ಸುದ್ದಿ