ಮೈಸೂರು: ಕಾಂಗ್ರೆಸ್ ಒಡೆದ ಮನೆಯಾಗಿದೆ. ಮೊದಲು ಅದನ್ನು ಜೋಡಿಸಿಕೊಳ್ಳುವುದು ಒಳ್ಳೆಯದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಲಹೆ ನೀಡಿದರು.
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಪಕ್ಷದವರು ಮೊದಲು ಅವರ ಮನೆಯ ಯಾತ್ರೆಯನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದರು. ಸಿದ್ದರಾಮಯ್ಯನವರದ್ದು ಒಂದು ಗುಂಪು, ಪರಮೇಶ್ವರ ಅವರದ್ದೇ ಒಂದು. ಹರಿಪ್ರಸಾದ್ ಅವರದ್ದೇ ಒಂದು ಗುಂಪು.
ಖರ್ಗೆಯವರದ್ದೇ ಒಂದು ಗುಂಪು. ಕೆ.ಹೆಚ್.ಮುನಿಯಪ್ಪ ಅವರದ್ದೇ ಒಂದು ಗುಂಪು. ಹೀಗೆ ನಾನಾ ಗುಂಪುಗಳಾಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಭಾರತ ಜೋಡೊ ಯಾತ್ರೆ ಮಾಡುವುದಕ್ಕಿಂತ ಮೊದಲು ಅವರ ಮನೆ ಗಳನ್ನು ಸರಿಪಡಿಸಿಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರೆ ಅನುಕೂಲವಾಗುತ್ತದೆ ಎಂಬುದು ನನ್ನ ಭಾವನೆ ಎಂದರು.
PublicNext
05/09/2022 04:56 pm