ನವದೆಹಲಿ : ಇವತ್ತು ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರ 110 ನಿಮಿಷಗಳ ಭಾಷಣದ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಿರಸ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ವಾದ್ರಾ ಅವರು, ಮೋದಿ ಅವರು ಭಾಷಣದಲ್ಲಿ ಹೊಸದನ್ನು ಏನಾದ್ರೂ ಹೇಳುತ್ತಾರೆ ಎಂದು ಭಾವಿಸಿದ್ದೆ, ಆದ್ರೆ ಆ ಭಾಷಣದಲ್ಲಿ ಹೊಸದೇನಿಲ್ಲ ಅದೇ ಪೊಳ್ಳು ಭರವಸಗಳೇ, ಅವರ ಭಾಷಣ ಕೇಳಿ ಬೋರ್ ಆಯ್ತು, ನಾನು ಸ್ಕೂಲ್‌ಗೆ ಹೋಗ್ತಾ ಇದ್ದಾಗ ಗಣಿತದ ಡಬಲ್ ಕ್ಲಾಸ್ ಎಷ್ಟು ಬೋರ್ ಆಗ್ತಿತ್ತೋ ಹಾಗಿತ್ತು ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೇ ಅವರ ಪಕ್ಷದ ನಾಯಕರಿಗೆ ಮೋದಿ ಅವರ ಭಾಷಣ ಕೇಳೋ ಆಸಕ್ತಿ ಇರಲಿಲ್ಲ, ಪಿಯೂಸ್ ಗೊಯಲ್ ಅವರಿಗೆ ಬೋರ್ ಆಗಿ, ನಿದ್ದೆ ಮಾಡ್ತಿದ್ರು, ಇನ್ನು ಜೆ.ಪಿ ನಡ್ಡಾ, ಹಾಗೂ ಅಮಿತ್ ಶಾ ಅವರಿಗೂ ಭಾಷಣ ಕೇಳೋ ಆಸಕ್ತಿ ಇರಲಲ್ಲ, ಎಂದು ವಾದ್ರಾ ಹೇಳಿದ್ದಾರೆ. ಪ್ರಧಾನಿ ಮೋದಿಯವರ 11 ನಿರ್ಣಯಗಳು "ಪೊಳ್ಳು" ಎಂದು ಅವರು ವಾಗ್ದಾಳಿ ನಡೆಸಿದರು
ಇನ್ನು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದ್ದರೆ ಅದಾನಿ ವಿಷಯದ ಬಗ್ಗೆ ಚರ್ಚೆಗೆ ಬಿಜೆಪಿ ಏಕೆ ಒಪ್ಪುವುದಿಲ್ಲ ಎಂದು ಹೇಳಿದರು.
ಜೆ. ಪಿ ನಡ್ಡಾ ಸುಮ್ಮನೆ ಕುಳಿತಿದ್ರು, ಮೋದಿ ಅವರನ್ನು ನೋಡಿದ ತಕ್ಷಣ, ಅವರು ಗಮನವಿಟ್ಟು ಕೇಳುತ್ತಿರುವಂತೆ ವರ್ತಿಸುತ್ತಿದ್ದರು. ಅಮಿತ್ ಶಾ ಅವರು ಕೂಡ ತಲೆಯ ಮೇಲೆ ಕೈ ಹಾಕಿದ್ದರು, ಪಿಯೂಷ್ ಗೋಯಲ್, ಅವರು ನಿದ್ರೆಗೆ ಜಾರುತ್ತಿದ್ರು. ಇದು ನನಗೆ ಹೊಸ ಅನುಭವವಾಗಿತ್ತು, ಎಂದು ಹೇಳಿದ್ದಾರೆ.
PublicNext
14/12/2024 09:39 pm