ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳ ಮೇಲೆ ರೇಪ್‌ ಮಾಡಲ್ಲ, ಅವರ ನಡವಳಿಕೆಯೇ ಬೇರೆ'

ಮಂಡ್ಯ: ಶಾಸಕ ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳ ಮೇಲೆ ರೇಪ್‌ ಮಾಡುವವರಲ್ಲ. ಅವರ ನಡುವಳಿಕೆಯೇ ಬೇರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್ ಮಾಡಲ್ಲ. ಬಹುಶಃ ಅವರ ಒಂದು ಸಿಡಿ ಇದೆ ಅದನ್ನು ನೋಡಿದರೆ ಏನು ಅಂತ ಗೊತ್ತಾಗತ್ತದೆ. ಆದರೆ ಅದನ್ನು ನೋಡದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ ಎಂದು ಹಳೇ ಪ್ರಕರಣದ ಕುರಿತು ಟಾಂಗ್ ನೀಡಿದ್ದಾರೆ.

ಅಲ್ಲದೆ ಜನಪ್ರತಿನಿಧಿಗಳ ಬಳಿ ಅಹವಾಲು ತಂದಾಗ ಗೌರವಯುತವಾಗಿ ಮನವಿ ಸ್ವೀಕಾರ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದು ಅನ್ನೋದನ್ನ ಅವರಿಗೆ ಮನವರಿಕೆ ಮಾಡಬೇಕು. ಆ ರೀತಿ ಆ ಹೆಣ್ಣು ಮಗಳ ಮೇಲೆ ಅಗೌರವವಾಗಿ ನಡೆದುಕೊಂಡಿದ್ದು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವಂತದ್ದಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಎಚ್‌ಡಿ ಕುಮಾರಸ್ವಾಮಿ, 'ಜನರ ಮನಸ್ಸಿನಲ್ಲಿ ಅಪನಂಬಿಕೆ ಬಾರದೆ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿರುವುದು ಸರ್ಕಾರದ ಕರ್ತವ್ಯ. ಈ ವಿಚಾರವನ್ನ ನಾವು ಸಾರ್ವಜನಿಕವಾಗಿ ಚೆರ್ಚೆ ಮಾಡುವಂತದ್ದು ಅನಾವಶ್ಯಕ. ಘಟನೆ ನಡೆದಿರುವ ಬಗ್ಗೆ ಸತ್ಯಾಂಶಗಳ ಆಧಾರದ ಮೇಲೆ ಕ್ರಮ ಆಗಬೇಕು' ಎಂದು ತಿಳಿಸಿದರು.

Edited By : Vijay Kumar
PublicNext

PublicNext

04/09/2022 06:27 pm

Cinque Terre

78.71 K

Cinque Terre

9

ಸಂಬಂಧಿತ ಸುದ್ದಿ