ಚಂಡೀಗಢ: ಬಟ್ಟೆ ಶೋರೂಮ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಐವರು ದುಷ್ಕರ್ಮಿಗಳು ಮನಬಂದಂತೆ ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಇಲ್ಲಿನ ರಿಥೋಜ್ ಗ್ರಾಮದ ನಿವಾಸಿಯಾದ ಬಿಜೆಪಿ ನಾಯಕ ಸುಖ್ಬೀರ್ ಖತಾನಾ ಅಲಿಯಾಸ್ ಸುಖಿ ತನ್ನ ಸ್ನೇಹಿತನೊಂದಿಗೆ ಶೋರೂಮ್‌ಗೆ ಹೋಗಿದ್ದಾಗ ಸದರ್ ಬಜಾರ್ ಪ್ರದೇಶದಲ್ಲಿ ಅವರನ್ನು ಶೂಟ್ ಮಾಡಿ ಕೊಲ್ಲಲಾಗಿದೆ.
ಸುಖಬೀರ್ ಖನಾತಾ ಅವರು ಬಟ್ಟೆ ಬಳಿಗೆ (ಶೋ ರೂಮ್) ಪ್ರವೇಶಿಸುತ್ತಿದ್ದಂತೆ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಇತರ ವ್ಯಾಪಾರಿಗಳೂ ಸ್ಥಳದಿಂದ ಹೆದರಿ ಓಡಿ ಹೋಗಿದ್ದಾರೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸುಖ್ಬೀರ್ ಖತಾನಾ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು, ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಸಹರಾನ್ ತಿಳಿಸಿದ್ದಾರೆ.
ಕೃತ್ಯ ನಡೆದ ಬಟ್ಟೆ ಶೋರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬಂದೂಕು ಹಿಡಿದಿದ್ದ ದಾಳಿಕೋರರ ದೃಶ್ಯ ಸೆರೆಯಾಗಿದೆ.
PublicNext
02/09/2022 09:08 am