ಗದಗ: ತುಮಕೂರು ವಿವಿನಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಎಚ್.ಕೆ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಿಸರ್ಚ್ ಮಾಡ್ಲಿ. ಆದ್ರೆ, ಅಧ್ಯಯನ ಪೀಠ ಸ್ಥಾಪನೆ ಮಾಡ್ತೀವಿ, ವಿವಿಗೆ ಸಾವರ್ಕರ್ ಹೆಸರು ಇಡ್ತೀವಿ, ರಸ್ತೆಗೆ ಹೆಸರು ಇಡ್ತೀವಿ ಅಂದ್ರೆ ಅದೊಂದು ರಾಜಕೀಯ ನಿರ್ಣಯವೇ ವಿನ: ಶೈಕ್ಷಣಿಕ ನಿರ್ಣಯ ಅಲ್ಲ ಎಂದರು.
ಗುಲಾಂ ನಬಿ ಆಜಾದ್ ಅವರಿಗೆ ಈಗ ಜ್ಞಾನೋದಯ ಆಯ್ತಾ? ಎಂದು ಕಿಡಿಕಾರಿದ ಅವರು, ಪಕ್ಷದಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸಿ ರಾಜೀನಾಮೆ ನೀಡಿರುವುದು ಎಷ್ಟು ಸರಿ? ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಕಾರ್ಯಕ್ರಮ ಮೂಲಕ ದೇಶದಲ್ಲಿ ಹೋರಾಟ ಆರಂಭಿಸಿದ ಸಮಯದಲ್ಲಿ ರಾಜೀನಾಮೆ ನೀಡಿದ್ದು ಜನದ್ರೋಹಿ ನಿರ್ಧಾರ. ಇನ್ನು ಕೆಪಿಟಿಸಿಎಲ್ ಎಕ್ಸಾಂ ಅಕ್ರಮ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ 3 ವರ್ಷದ ಅವಧಿಯಲ್ಲಿ ಲಂಚ, ಅವ್ಯವಹಾರ, ಅಕ್ರಮಗಳ ಮೂಲಕ ನೇಮಕಾತಿ ಮಾಡುತ್ತಿದೆ. ಕೆಪಿಟಿಸಿಎಲ್ ನಲ್ಲೂ ಗದಗ ಮೂಲವಾಗಿಟ್ಟುಕೊಂಡು ಅವ್ಯವಹಾರ ನಡೆದಿದೆ. ಮೆರಿಟ್ ಮೇಲೆ ಉದ್ಯೋಗ ಸಿಗುತ್ತಿಲ್ಲ. ತಪ್ಪಿತಸ್ಥರನ್ನು ಗುರುತಿಸಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು. ಆರೋಪಿಗಳಿಗೆ ಮುಂದೆ ಅವಕಾಶ ಸಿಗದಂತೆ ಕ್ರಮ ವಹಿಸಬೇಕು. ಪ್ರತ್ಯೇಕವಾಗಿ ತನಿಖಾ ತಂಡ ರಚಿಸಬೇಕು ಎಂದು ಎಚ್.ಕೆ. ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದರು.
PublicNext
27/08/2022 08:59 pm