ಬಹುಕಾಲದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬೇತರ ನಿಷ್ಠಾವಂತ ಹಿರಿಯ ನಾಯಕರೊಬ್ಬರು ಆಗಮಿಸಲಿದ್ದಾರೆ
ಸೆಪ್ಟೆಂಬರ್ ತಿಂಗಳಲ್ಲಿ ನೂತನ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಬೇಕಾಗಿದ್ದು, ಅದಕ್ಕೂ ಮುನ್ನವೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಚ್ಚರಿಯ ಹೆಸರೊಂದನ್ನು ಘೋಷಿಸಿದ್ದಾರೆ.
ಬೇರಾರೂ ಅಲ್ಲ ಹಿರಿಯ ಕಾಂಗ್ರೆಸ್ಸಿಗ ರಾಜಸ್ಥಾನದ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಎಂದು ಹೇಳಲಾಗುತ್ತಿದೆ.
ಶ್ರಿಮತಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದು, ಅದಕ್ಕೂ ಮುನ್ನವೇ ಅಶೋಕ್ ಗೆಹಲೋಟ್ ಅವರಿಗೆ ಪಕ್ಷದ ನಾಯಕತ್ವನ್ನು ವಹಿಸಲು ಉತ್ಸುಕರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ ಸ್ವತಃ ಅಶೋಕ್ ಗೆಹಲೋಟ್ ಅವರು, ರಾಹುಲ್ ಗಾಂಧಿನೇ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಾಹುಲ್ ಅಧ್ಯಕ್ಷರಾಗದಿದ್ದರೆ ಪಕ್ಷದ ಕಾರ್ಯಕರ್ತರ ಮನೋಬಲ ಕುಸಿಯಲಿದೆ. ರಾಹುಲ್ ಗಾಂಧಿನೇ ಸರ್ವಸಮ್ಮತ ಅಭ್ಯರ್ಥಿಯಾಗುವುದು ಉಚಿತ ಎಂದಿದ್ದಾರೆ.
ರಾಹುಲ್ ಗಾಂಧಿಯ ನಿರಂತರ ವೈಫಲ್ಯದಿಂದ ಕಂಗೆಟ್ಟಿರುವ ಅನೇಕ ಹಿರಿಯ ನಾಯಕರು ಪಕ್ಷ ತ್ಯಜಿಸಿದ್ದಾರೆ. ಈ ಹಿಂದೆ ಕಪಿಲ್ ಸಿಬ್ಬಲ್ ಸೇರಿದಂತೆ ಅನೇಕ ಹಿರಿಯ ತಲೆಗಳು ಬಹಿರಂಗವಾಗಿ ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಜಮ್ಮುಕಾಶ್ಮೀರದ ಗುಲಾಂ ನಬಿ ಆಜಾದ್ ಹಾಗೂ ಆನಂದ ಶರ್ಮಾ ಸಹ ಗುಡ್ ಬೈ ಹೇಳಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ ಗಾಗಿ ಗಾಂಧಿ ಕುಟುಂಬದ ಹೊರತಾಗಿ ಹಿರಿಯ ನಾಯಕನನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದು ಸೋನಿಯಾಗೆ ಅನಿವಾರ್ಯವಾಗಿದೆ.
ಆದರೆ ದೇಶದ ಕಾಂಗ್ರೆಸ್ ಕಾರ್ಯಕರ್ತರು ಅಶೋಕ್ ಗೆಹಲೋಟ್ ನಾಯಕತ್ವ ಸ್ವೀಕರಿಸುವರೆ? ಈಗಾಗಲೇ ಸಾಕಷ್ಟು ಜರ್ಜರಿತವಾಗಿರುವ ಪಕ್ಷಕ್ಕೆ ಗೆಹಲೋಟ್ ಬಲ ತುಂಬುವರೆ ಎಂಬುದು ಯಕ್ಷಪ್ರಶ್ನೆ.
PublicNext
24/08/2022 12:46 pm