ಗದಗ: ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ಸೋಮವಾರ ಅದ್ಧೂರಿಯಾಗಿ ತಮ್ಮ ಜನ್ಮದಿನಾಚರಣೆ ಆಚರಣೆ ಮಾಡಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಬಿಜೆಪಿ ಉಪಾಧ್ಯಕ್ಷ ವಿಜೆಯೇದ್ರ ಬಂದಿದ್ದರು. ರಾಮಣ್ಣ ಲಮಾಣಿಯವರಿಗೆ ಮತ್ತೊಂದು ಸಲ ಆಶೀರ್ವಾದ ಮಾಡಿ ಎಂದು ಭಾಷಣದಲ್ಲಿ ಹೇಳಿದರು.
ವಿಜೆಯೇಂದ್ರ ಭಾಷಣ ಮಾಡಿರುವ ವಿಡಿಯೋವನ್ನು ಲಕ್ಷ್ಮಣ ಲಮಾಣಿಯವರು ಫೇಸ್‌ಬುಕನಲ್ಲಿ ಹರಿಬಿಟ್ಟಿದ್ದರು ಅದನ್ನು ನೋಡಿದ ಬಿಜೆಪಿ ಕಾರ್ಯಕರ್ತರು ಕಾಮೆಂಟ್ ಮಾಡಿ ನಾನು ಪಕ್ಕ ನರೇಂದ್ರ ಮೋದಿ ಪ್ಯಾನ್ ಹಾಗೂ ಬಿಜೆಪಿ ಪಕ್ಕಾ ಕಾರ್ಯಕರ್ತ ಈ ಸಾರಿ ರಾಮಣ್ಣ ಲಮಾಣಿಯವರಿಗೆ ಟಿಕೆಟ್ ಸಿಕ್ಕರು ಅವರಿಗೆ ವೋಟ್ ಮಾಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ರಸ್ತೆಯ ಪೋಟೋಗಳನ್ನು ಹಾಕಿ ಮೊದಲು ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಎಂದು ಕಾಮೆಂಟ್ ಮಾಡಿದರೆ ಇನ್ನೂ ಕೇಲವರು ಮೊದಲು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ನಂತರ ವೋಟ್ ಕೇಳಿ ಎಂದು ಕಾಮೆಂಟ್ ಮಾಡಿದ್ದಾರೆ.
PublicNext
23/08/2022 08:18 pm