ತಮಿಳುನಾಡು : ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರೆ ದಾಳಿ ಮಾಡಿದ್ದಾರೆ.
ನಿನ್ನೆ ಪುದುಚೇರಿ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಈ ಘಟನೆ ನಡೆದಿದೆ. ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ಆಗಿರುವ ದಿನೇಶ್ ಗುಂಡೂರಾವ್ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾರಿಗೆ ಹತ್ತದಂತೆ ತಡೆದು ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಿನೇಶ್ ಗುಂಡೂರಾವ್ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾನಿಮಾಡಿದ್ದಾರೆ.
ಮಾಜಿ ಸಚಿವರೊಬ್ಬರನ್ನ ಬೆಂಬಲಿಸುವ ಬಣ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಘೋಷಣೆ ಕೂಗಿತ್ತಿದ್ದರು. ಇನ್ನು ಇದೇ ವೇಳೆ ದಿನೇಶ್ ಗುಂಡುರಾವ್ ಪುದುಚೇರಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಭೆ ಮುಗಿಸಿ ಹೊರ ಬರುತ್ತಿದ್ದಂತೆ ಗಲಾಟೆ ಶುರುವಾಗಿದೆ.
ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಹೋಗಿದ್ದ ಗುಂಡೂರಾವ್ . ಮಾಜಿ ಸಿಎಂ ನಾರಾಯಣಸ್ವಾಮಿ ಬೆಂಬಲಿಗರು ಕೂಡ ಜಮಾಯಿಸಿದ್ದರು.ಎರಡು ಗುಂಪುಗಳ ನಡುವೆ ವಾಗ್ವಾದ ಮತ್ತು ಘೋಷಣೆ ಕೂಗಿದ್ದಾರೆ.ದಿನೇಶ್ ಗುಂಡೂರಾವ್ ಸಭೆಯಿಂದ ಹೊರಬರುತ್ತಿದ್ದಂತೆಯೇ ಗಲಾಟೆ ಶುರುವಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸುತ್ತುವರಿದು ಅಶಿಸ್ತಿನ ವರ್ತನೆ ತೋರಿಸಿದ್ದಾರೆ.ಅಲ್ಲದೇ ನಾಯಕತ್ವ ಬದಲಾವಣೆ ಕುರಿತು ಉತ್ತರ ನೀಡುವಂತೆ ದಿನೇಶ್ ಗುಂಡೂರಾವ್ ಗೆ ಕಾರ್ಯಕರ್ತರ ಒತ್ತಾಯ ಮಾಡಿದ್ದಾರೆ. ಕಾರು ಹತ್ತಿ ಹೊರಡುವಾಗ ಕೆಲವು ಕಾರ್ಯಕರ್ತರು ವಾಹನವನ್ನು ಸುತ್ತುವರಿದು ಗಲಾಟೆ ಮಾಡಿದ್ದಾರೆ .
ಇನ್ನು ಘಟನೆಯ ನಂತರ. ಪುದುಚೇರಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣಿಯನ್ ಐವರು ಕಾಂಗ್ರೇಸ್ ಕಾರ್ಯಕರ್ತರನ್ನ ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
PublicNext
22/08/2022 04:43 pm