ಭೋಪಾಲ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿದೇಶದ ಹುಡುಗಿಯರಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಆದಾಗ ನಾನು ಅಮೆರಿಕದಲ್ಲಿದ್ದೆ. ಅಲ್ಲಿದ್ದ ನನ್ನ ಪರಿಚಯದವರೊಬ್ಬರು ಬಿಹಾರದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಇದೇ ವೇಳೆ ನನ್ನ ಜೊತೆಯಲ್ಲಿದ್ದ ಅಲ್ಲಿನ ನಿವಾಸಿಯೊಬ್ಬರು. ಇಲ್ಲಿನ ಹುಡುಗಿಯರು ಯಾವ ಟೈಮ್‌ನಲ್ಲಿ ಬೇಕಾದ್ರೂ ಬಾಯ್‌ಫ್ರೆಂಡ್ಸ್‌ಗಳನ್ನ ಚೇಂಜ್ ಮಾಡ್ತಾರೆ. ಬಿಹಾರ ಸಿಎಂ ಕೂಡ ಅದೇ ರೀತಿ ಇರಬಹುದು. ಯಾವ ಕ್ಷಣದಲ್ಲಿ ಯಾರ ಕೈ ಹಿಡಿತಾರೆ, ಯಾರ ಕೈ ಬಿಡ್ತಾರೆ ಅನ್ನೋದೇ ಗೊತ್ತಾಗೋದಿಲ್ಲ' ಎಂದು ಹೇಳಿದ್ದಾರೆ.
ಈ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷಗಳು ಕಿಡಿಕಾರುತ್ತಿದ್ದಂತೆ ನಿನ್ನೆ (ಶನಿವಾರ) ವಿಜಯವರ್ಗಿಯಾ ಅವರು, 'ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಬಿಹಾರದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಕೇವಲ ವಿದೇಶಿ ಸ್ನೇಹಿತನ ಮಾತನ್ನು ಉಲ್ಲೇಖಿಸಿದ್ದಾಗಿ, ಆಕ್ಷೇಪಾರ್ಹ ಪದಗಳನ್ನು ಹೇಳಲಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
21/08/2022 09:26 am