ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು 2021ರಲ್ಲಿ ಅಮೆರಿಕದ ರೆಸ್ಟೋರೆಂಟ್‌ವೊಂದಕ್ಕೆ ತಮ್ಮ ಮಗನೊಂದಿಗೆ ಭೇಟಿ ನೀಡಿದಾಗ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಭಾರತೀಯ ಉದ್ಯಮಿ ಅರುಣ್ ಪುದೂರ್ ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ, 'ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ತಮ್ಮ ಮಗನೊಂದಿಗೆ ಅಮೆರಿಕದ ರೆಸ್ಟೊರೆಂಟ್‌ಗೆ ಹೋಗಿದ್ದಾಗ ನಡೆದದ್ದು ನಿಮ್ಮನ್ನು ನಗಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
57 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ನಲ್ಲಿ, ಜೈಶಂಕರ್ ಅವರು ಕೋವಿಡ್-19 ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ 2021ರಲ್ಲಿ ಯುಎಸ್ ಪ್ರವಾಸದ ಬಗ್ಗೆ ಮಾತನಾಡುವುದನ್ನು ಕಾಣಬಹುದು. "2021ರಲ್ಲಿ ನಾನು ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿ ವಾಸಿಸುವ ಮಗನೊಂದಿಗೆ ನಾನು ರೆಸ್ಟೋರೆಂಟ್‌ಗೆ ಹೋಗಿದ್ವಿ. ಈ ವೇಳೆ ರೆಸ್ಟೋರೆಂಟ್ ಪ್ರವೇಶದ್ವಾರದಲ್ಲಿ ನಮ್ಮನ್ನು ತಡೆದು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ನೀಡುವಂತೆ ಕೇಳಲಾಯಿತು. ಜೈಶಂಕರ್ ನಾನು ಫೋನ್‌ನಲ್ಲಿ ಪ್ರಮಾಣಪತ್ರವನ್ನು ತೋರಿಸಿದರೆ, ನನ್ನ ಮಗ ತನ್ನ ವ್ಯಾಲೆಟ್‌ನಿಂದ ಲಸಿಕೆ ಪ್ರಮಾಣಪತ್ರವನ್ನು ತೆಗೆದು ಸಿಬ್ಬಂದಿಯ ಮುಂದೆ ಹಾಜರುಪಡಿಸಿದನು. ಆಗ ಅವರ ದಾಖಲೆಯನ್ನು ಕಂಡು ಅವರು ಇನ್ನು ಎಲ್ಲಿದ್ದಾರೆ ಎಂದು ನನಗೆ ನಾನೇ ಹೇಳಿಕೊಂಡೆ ಎಂದು ಸಚಿವರು ವಿಡಿಯೋದಲ್ಲಿ ಹೇಳಿದ್ದಾರೆ.
ಈ ಮೂಲಕ ಜೈಶಂಕರ್ ಅವರು Co-WIN ಪೋರ್ಟಲ್ ಅನ್ನು ಹೊಂದುವುದರ ಪ್ರಯೋಜನಗಳನ್ನು ವಿವರಿಸಿದೆ. ಇದು ಜನರಿಗೆ ವಿಷಯಗಳನ್ನು ಸುಲಭಗೊಳಿಸಿದೆ, ಏಕೆಂದರೆ ಪ್ರತಿಯೊಬ್ಬರೂ ಅದನ್ನು ತಮ್ಮ ಫೋನ್‌ನಲ್ಲಿ ಹೊಂದಿದ್ದಾರೆ ಮತ್ತು ಡಾಕ್ಯುಮೆಂಟ್ ಅನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ತೋರಿಸಬಹುದು.
PublicNext
17/08/2022 02:40 pm