ವರದಿ : ರವಿ ಕುಮಾರ್, ಕೋಲಾರ
ಕೋಲಾರ : ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಗೌಡ ಬೆಂಬಲಿಗರಿಗೆ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡ ಓಪನ್ ವಾರ್ನಿಂಗ್ ನೀಡಿದ್ದಾರೆ. ತಡರಾತ್ರಿ ಸಂಪಂಗೆರೆ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ವೇಳೆ ಈ ಘಟನೆ ನಡೆದಿದ್ದು, ಏಯ್ ಸುಮ್ನೆ ಇರೋಲೆ,ನಿಮಗೆ ಯಾರು ಹೇಳಿ ಕಳ್ಸಿದ್ದಾರೋ ಗೊತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿಮಗೆ ಕೊಡ್ತೀವಿ ಕೆಲಸ ನೋಡ್ಕೊಂಡಿರಿ. ಸಂಪಂಗೆರೆ ಗ್ರಾಮದಲ್ಲಿ ನಿಮ್ಮ ದಬ್ಬಾಳಿಕೆ ಮುಂದೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
75ನೇ ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ,ಮಾಲೂರು ಕ್ಷೇತ್ರದ ಶಾಸಕರಾದ ಕೆ.ವೈ ನಂಜೇಗೌಡರು ಕಳೆದ ಐದು ದಿನಗಳಿಂದ ಪಾದಯಾತ್ರೆ ಮಾಡ್ತಿದ್ದಾರೆ. 225 ಕಿಮಿ ದೂರದವರೆಗೂ ಪಾದಯಾತ್ರೆಯ ಗುರಿ ಹೊಂದಿದ್ದು, ಈಗಾಗಲೇ 160 ಕಿ.ಮೀ. ನಷ್ಟು ಪಾದಯಾತ್ರೆ ಮುಗಿಸಿದ್ದಾರೆ. ತಡರಾತ್ರಿ ಮಾಲೂರು ತಾಲೂಕಿನ ಗಡಿ ಭಾಗವಾಗಿರುವ ಸಂಪಂಗೆರೆ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ವೇಳೆ ಈ ರೀತಿ ಮಾಜಿ ಶಾಸಕ ಮಂಜುನಾಥ ಗೌಡ ಬೆಂಬಲಿಗರಿಗೆ ವಾರ್ನಿಂಗ್ ನೀಡಿದ್ದಾರೆ.
ಸಂಪಂಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಇದ್ದು, ಮಂಜುನಾಥ ಗೌಡ ಪರ ಕಾರ್ಯಕಾರ್ತರು ಹೆಚ್ಚಾಗಿ ಇದ್ದಾರೆ. ಸದ್ಯ ಶಾಸಕರ ಬಹಿರಂಗ ವಾರ್ನಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದೆ.
PublicNext
12/08/2022 03:40 pm