ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯನವರಿಗೆ ಈಗ ಜನ್ಮದಿನದ ಆಚರಣೆ ಬೇಕಿತ್ತಾ ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ದಿನ ಆಚರಿಸಿಕೊಳ್ಳಲಿ. ಯಾರು ಬೇಡಾ ಅಂದ್ರು. ಈಗೀನ ಸ್ಥಿತಿಯಲ್ಲಿ ಇದು ಬೇಕಿರಲಿಲ್ಲ. ಎಲ್ಲೆಡೆ ಮಳೆ ಆಗುತ್ತಿದೆ. ಈ ಸಮಯದಲ್ಲಿ ಈ ಆಚರಣೆ ಬೇಕಿತ್ತಾ ಎಂದು ಬಿಜೆಪಿ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

ವಿರೋಧ ಪಕ್ಷ ಅನ್ನೋದು ಒಂದು ರೀತಿ ಶ್ಯಾಡೋ ಕ್ಯಾಬಿನೆಟ್.ಆದರೆ, ಆಡಳಿತ ಪಕ್ಷದ ತಪ್ಪು-ಒಪ್ಪುಗಳನ್ನೆ ಕಾಂಗ್ರೆಸ್ ಪಕ್ಷ ಹೇಳಲಿಲ್ಲವೇ ನೋಡಿ. ಹೀಗಿದ್ದರೇ ವಿರೋಧ ಪಕ್ಷ ಯಾಕೆ ಬೇಕು ಅನ್ನೋ ಅರ್ಥದಲ್ಲಿಯೇ ಆರ್.ಅಶೋಕ್ ಕಾಮೆಂಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದವರು ಏನೇ ಮಾಡಿದರೂ ಸರಿಯೇ. ಪ್ರಧಾನಿ ಮೋದಿ ಇರೋವರೆಗೂ ಬಿಜೆಪಿಯನ್ನ ಏನೂ ಮಾಡೋಕೆ ಆಗೋದೇ ಇಲ್ಲ ಅಂತಲೇ ಆರ್.ಅಶೋಕ್ ಅತೀ ವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ.

Edited By :
PublicNext

PublicNext

04/08/2022 10:16 pm

Cinque Terre

77.38 K

Cinque Terre

7

ಸಂಬಂಧಿತ ಸುದ್ದಿ