ಬಾಗಲಕೋಟೆ: ಸಿಎಂ ಆಗುವ ಎಲ್ಲ ಅರ್ಹತೆ ಎಸ್.ಆರ್ ಪಾಟೀಲ್ ಅವರಿಗೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಎಸ್.ಆರ್ ಪಾಟೀಲ್ ಅವರು ಸಿಎಂ ಆಗಲು ಎಲ್ಲ ರೀತಿಯಲ್ಲೂ ಅತ್ಯಂತ ಯೋಗ್ಯ ವ್ಯಕ್ತಿ. ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪಾಟೀಲ್ ಅವರ ಹೆಸರು ಶಿಫಾರಸ್ಸು ಮಾಡಿದ್ದೆ. ಅವರು ಅಧ್ಯಕ್ಷ ಸ್ಥಾನಕ್ಕೂ ಯೋಗ್ಯ ವ್ಯಕ್ತಿ. ಪ್ರಾಮಾಣಿಕತೆ, ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಸಾಕಾರರೂಪ ಎಂದರೆ ಅದು ಎಸ್.ಆರ್ ಪಾಟೀಲ್ ಎಂದು ಮೊಯ್ಲಿ ಅವರು ಗುಣಗಾನ ಮಾಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಬ್ಬ ಸಿಎಂ ಆಕಾಂಕ್ಷಿ ಹುಟ್ಟಿಕೊಂಡಂತಾಗಿದೆ. ಸದ್ಯ ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇದ್ದಾರೆ. ಈಗ ಎಸ್.ಆರ್ ಪಾಟೀಲ್ ಅವರ ಹೆಸರನ್ನು ಹಿರಿಯ ನಾಯಕ ಮೊಯ್ಲಿ ಅವರೇ ಆ ಪಟ್ಟಿಯಲ್ಲಿ ಸೇರಿಸಿದ್ದಾರೆ.
PublicNext
31/07/2022 08:36 pm