ಮಂಗಳೂರು: ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಭೇಟಿಕೊಟ್ಟು ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ಶೋಭಾ ಕರಂದ್ಲಾಜೆ ಅವರ ಮುಂದೆ ಪ್ರವೀಣ್ ಕುಟುಂಬದವರು ಕಣ್ಣೀರು ಹಾಕಿ ನ್ಯಾಯಕೊಡಿಸಿ ಅಂತಲೂ ಕೇಳಿದರು. ನ್ಯಾಯ ಕೊಡಿಸೋ ಭರವಸೆ ಕೊಟ್ಟ ಶೋಭಾ ಅವ್ರು ಐದು ಲಕ್ಷ ರೂಪಾಯಿ ನಗದು ನೀಡಿದ್ದಾರೆ. ತಮ್ಮ ಒಂದು ತಿಂಗಳ ಸಂಬಳವನ್ನ ಕೊಟ್ಟಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಪ್ರವೀಣ್ ಸಾವು ದುಃಖ ತಂದಿದೆ. ಪ್ರೀತಿಯಿಂದ ಬದುಕಿದ್ದ ಪ್ರವೀಣ್ ಇವತ್ತು ನಮ್ಮೊಂದಿಗಿಲ್ಲ. ಆತ ಹತ್ಯೆಯಾದಾಗ ನಾನು ದೆಹಲಿಯಲ್ಲಿದ್ದೆ.
ಆದರೆ, ಈಗಾಗಲೇ ಈ ಹತ್ಯೆಗೆ ಸಂಬಂಧಿಸಿದಂತೆ NIA ಗೆ ತನಿಖೆ ನಡೆಸಲು ನೀಡಲಾಗಿದೆ. ಈ ತನಿಖೆಯಲ್ಲಿ ನಿಜವಾದ ಆರೋಪಿ ಸಿಗುತ್ತಾರೆ.ಅವರಿಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು.
PublicNext
31/07/2022 12:32 pm