ಕೋಲ್ಕತ್ತಾ: ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆಸಿ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಯನ್ನು ಗುರುವಾರ ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ.
ದೇಶದ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಸಚಿವ ಪಾರ್ಥ ಚಟರ್ಜಿಗೆ ಕೊನೆಗೂ ತಲೆದಂಡ ಆಗಿದೆ. ಮಮತಾ ಬ್ಯಾನರ್ಜಿ ಅವರು, ಪಾರ್ಥ ಅವರಿಗೆ ಕೇವಲ ಸಂಪುಟ ಮಾತ್ರವಲ್ಲದೆ ಪಕ್ಷದಿಂದಲೂ ಗೆಟ್‌ಪಾಸ್ ಕೊಟ್ಟಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಪಾರ್ಥ ಚಟರ್ಜಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಸಿಕ್ಕಿರುವ ಕೋಟಿ ಕೋಟಿ ಹಣ. ಈ ಹಿಂದೆ 21.90 ಕೋಟಿ ಹಣವನ್ನ ಅರ್ಪಿತಾ ನಿವಾಸದಲ್ಲಿ ಸೀಜ್ ಮಾಡಿದ್ದ ಇ.ಡಿ ಅಧಿಕಾರಿಗಳು ಇಂದು ಬರೋಬ್ಬರಿ 28.90 ಕೋಟಿ ಹಣ ಪತ್ತೆ ಹಚ್ಚಿದ್ದಾರೆ. ಟಾಯ್ಲೆಟ್ನಲ್ಲಿ ಅಡಗಿಸಿಟ್ಟಿದ್ದ 28.90 ಕೋಟಿ ಹಣ ಮತ್ತು 5 ಕೆ.ಜಿ ಚಿನ್ನಾಭರಣವನ್ನ ಇ.ಡಿ ವಶಕ್ಕೆ ಪಡೆದಿದೆ.
PublicNext
28/07/2022 05:29 pm