ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಸ್ ಲೀಡರ್. ಆದರೆ, ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು. ಎಲ್ಲಿ ಕೊಡಬಾರದು ಅನ್ನೊದನ್ನ ಪಾರ್ಲಿಮೆಂಟ್ರಿ ಬೋರ್ಡ್ ನಿರ್ಧರಿಸುತ್ತದೆ. ಅದೇ ಸರ್ವೋಚ್ಛ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ, ಯಡಿಯೂರಪ್ಪನವರು ಚುನಾವಣೆ ನಿಲ್ಲೋದಿಲ್ಲ ಅಂತ ಮಾತ್ರ ಹೇಳಿದ್ದಾರೆ.ಆದರೆ, ಸಕ್ರಿಯ ರಾಜಕಾರಣದಿಂದ ದೂರ ಹೋಗ್ತಾಯಿದ್ದೀನಿ ಅಂತ ಎಲ್ಲೂ ಹೇಳಿಯೇ ಇಲ್ಲ. ಇಂತಹ ಯಡಿಯೂರಪ್ಪನವರು ಮಾಸ್ ಲೀಡರ್. ಅವರು ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಪಾರ್ಟಿಯನ್ನ ಕಟ್ಟಿದವರಲ್ಲಿ ಇವರೂ ಕೂಡ ಒಬ್ಬರು ಅಂತಲೇ ಸಿ.ಟಿ.ರವಿ ಹೊಗಳಿದ್ದಾರೆ.
ಪ್ರಧಾನಿಗೂ ಟಿಕೆಟ್ ಕೊಡಬೇಕು ಅಂದ್ರೆ, ಅದನ್ನ ಪಾರ್ಲಿಮೆಂಟ್ರಿ ಬೋರ್ಡ್ ತಿರ್ಮಾನಿಸುತ್ತದೆ. ಅದೇ ಅಂತಿಮ ಅದೇ ಸರ್ವೋಚ್ಛ. ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು. ಯಾರಿಗೆ ಕೊಡಬಾರದು ಅನ್ನೋದನ್ನ ಪಾರ್ಲಿಮೆಂಟ್ರಿ ಬೋರ್ಡ್ ತಿರ್ಮಾನಿಸುತ್ತದೆ. ಈ ವಿಚಾರ ಸ್ವತಃ ಬಿ.ಎಸ್.ಯಡಿಯೂರಪ್ಪನವರಿಗೂ ಗೊತ್ತದೆ ಅಂತಲೇ ಸಿ.ಟಿ.ರವಿ ಹೇಳಿದರು.
PublicNext
25/07/2022 12:07 pm