ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗಾಗಿಯೇ ಹೋರಾಟ ಕೂಡ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಆದ್ಯತೆ ಮೇರೆಗೆ ಈ ಬೇಡಿಕೆ ಈಡೇರಿಸಬೇಕಿತ್ತು. ಆದರೆ ಇವರ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ಕುಮಾರ್ ಸ್ವಾಮಿ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಎಲ್ಲ ಜಿಲ್ಲಾ ಮತ್ತು ತಾಲೂಕು ಹಾಗೂ ಸಮುದಾಯ ಕೇಂದ್ರಗಳನ್ನ ಮೇಲ್ದರ್ಜೆಗೆ ಏರಿಸುತ್ತೇವೆ ಎಂದು ಬೊಬ್ಬಿರಿದಿತ್ತು. ಆದರೆ, ಈಗೇನಾಗಿದೆ. ಆಕ್ಸಿಜನ್ ಘಟಕ,ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಪರಿಕರಗಳು ತುಕ್ಕು ಹಿಡಿದುವೆ ಎಂದು ಎಚ್‌ಡಿಕೆ ದೂರಿದರು.
ಹೀಗಿರೋವಾಗ ಉತ್ತರ ಕನ್ನಡ ಜಿಲ್ಲೆಯ ಜನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತಲೇ ಅಭಿಯಾನ ಮಾಡುತ್ತಿದ್ದಾರೆ. ನಿರಂತರವಾಗಿ ಹೋರಾಟ ಕೂಡ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ಜೆಡಿಎಸ್ ಬೆಂಬಲ ಕೂಡ ಇರುತ್ತದೆ ಎಂದು ಸರಣಿ ಟ್ವಿಟರ್ ಮೂಲಕ ಎಚ್ಡಿಕೆ ಹೇಳಿಕೊಂಡಿದ್ದಾರೆ.
PublicNext
25/07/2022 11:37 am